ಇರಾನ್‌ನಲ್ಲಿ ಅಲ್-ಖಾಯಿದ ನಾಯಕನ ಹತ್ಯೆ: ‘ನ್ಯೂಯಾರ್ಕ್ ಟೈಮ್ಸ್’ ವರದಿ

Update: 2020-11-14 18:18 GMT

ವಾಶಿಂಗ್ಟನ್, ನ. 14: ಅಮೆರಿಕದ ಆದೇಶದಂತೆ ಇಸ್ರೇಲಿ ಏಜಂಟರು ಆಗಸ್ಟ್‌ನಲ್ಲಿ ಇರಾನ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್-ಖಾಯಿದ ಭಯೋತ್ಪಾದಕ ಸಂಘಟನೆಯ ಎರಡನೇ ಸ್ಥಾನದಲ್ಲಿರುವ ನಾಯಕ ಮೃತಪಟ್ಟಿದ್ದಾನೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ.

ಅಲ್-ಖಾಯಿದ ಸದಸ್ಯ ಅಬ್ದುಲ್ಲಾ ಅಹ್ಮದ್ ಅಬ್ದುಲ್ಲಾನು 1998ರಲ್ಲಿ ಆಫ್ರಿಕದ ಎರಡು ಅಮೆರಿಕ ರಾಯಭಾರ ಕಚೇರಿಗಳ ಮೇಲೆ ನಡೆದ ಬಾಂಬ್ ದಾಳಿಗಳ ರೂವಾರಿ ಎಂದು ಆರೋಪಿಸಲಾಗಿದೆ.

ಅವನನ್ನು ಆಗಸ್ಟ್ 7ರಂದು ಟೆಹರಾನ್‌ನ ರಸ್ತೆಯೊಂದರಲ್ಲಿ ಮೋಟರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಶನಿವಾರ ಈ ವರದಿಯನ್ನು ನಿರಾಕರಿಸಿದ ಇರಾನ್, ತನ್ನ ನೆಲದಲ್ಲಿ ಅಲ್-ಖಾಯಿದ ಭಯೋತ್ಪಾದಕರಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News