ಬಸ್ ನಲ್ಲಿ ಬಂದೂಕುಧಾರಿಯಿಂದ ದಾಳಿ: 34 ಮಂದಿ ಮೃತ್ಯು

Update: 2020-11-15 18:00 GMT

ಇಥಿಯೋಪಿಯಾ: ಇಲ್ಲಿನ ಆಡಿಸ್ ಅಬಾಬಾ ಎಂಬಲ್ಲಿ ನಡೆದ ಉಗ್ರ ದಾಳಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಬಸ್ ಒಂದರಲ್ಲಿದ್ದ 34 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ.

ಈಗಾಗಲೇ 34 ಮಂದಿ ಮೃತಪಟ್ಟಿದ್ದು, ಇನ್ನೂ ಹೆಚ್ಚಿನ ಜನರು ಪ್ರಾಣ ಕಳೆದುಕೊಳ್ಳಬಹುದು ಎಂದು ಇಲ್ಲಿನ ಮಾನವಹಕ್ಕು ಆಯೋಗ ಮಾಹಿತಿ ನೀಡಿದೆ.

ಬಸ್ ಬೆನಿಂಶಂಗುಲ್ ಪ್ರಾಂತ್ಯ ತಲುಪಿದ್ದಂತೆ ಬಂದೂಕುಧಾರಿ ದಾಳಿ ನಡೆಸಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News