ಬೈಡನ್‌ಗೆ ಅಧಿಕಾರದ ಸುಗಮ ಹಸ್ತಾಂತರಕ್ಕೆ ಟ್ರಂಪ್ ನಕಾರ

Update: 2020-11-15 18:19 GMT

ವಾಶಿಂಗ್ಟನ್,ನ.15: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಬಳಿಕ ಅಧಿಕಾರದ ಹಸ್ತಾಂತರದ ಕುರಿತ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುತ್ತಿದ್ದು, ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಅಧಿಕಾರವನ್ನು ವರ್ಗಾಯಿಸಲು ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆಗಳು ನಡೆದಿರುವುದಾಗಿ ಟ್ರಂಪ್ ಟ್ವಿಟ್ಟರ್‌ನಲ್ಲಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಕಲಿ ಮಾಧ್ಯಮಗಳ ಕಣ್ಣಲ್ಲಿ ಮಾತ್ರ ತನ್ನ ಎದುರಾಳಿ ಜೋ ಬೈಡೆನ್ ಗೆಲುವು ಸಾಧಿಸಿದ್ದಾರೆ ಹಾಗೂ ತನ್ನ ಆಡಳಿತವು ಸಾಗಬೇಕಾದ ದಾರಿ ಇನ್ನೂ ಬಹಳ ದೂರ ಇದೆ ಎಂದರು.

  ಚುನಾವಣೆಯಲ್ಲಿ ಪತ್ನಿ ಮೆಲನಿಯಾ ಹಾಗೂ ಅಳಿಯ ಜಾರೆಡ್ ಕುಶ್ನೆರ್ ಮನವೊಲಿಕೆಯ ಯತ್ನಗಳ ಹೊರತಾಗಿಯೂ ಟ್ರಂಪ್ ಅವರು ಅಧಿಕಾರದಿಂದ ನಿರ್ಗಮಿಸಲು ನಿರಾಕರಿಸುತ್ತಿದ್ದಾರೆ.

   ಈ ಮಧ್ಯೆ ಟ್ರಂಪ್ ಅವರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯೆಲೀಗ್ ಮ್ಯಾಕಾನಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ನಿಯೋಜಿತ ಅಧ್ಯಕ್ಷ ಬೈಡೆನ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಟ್ರಂಪ್ ಪಾಲ್ಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡಿದ್ದರು. ಅದರ ಬದಲು, ತನ್ನ ಅಧ್ಯಕ್ಷ ಹುದ್ದೆಯ ಎರಡನೆ ಅವಧಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಟ್ರಂಪ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ಟ್ರಂಪ್ ಆಡಳಿತವು ಎರಡನೆ ಅವಧಿಗಾಗಿ ಸಿದ್ಧತೆ ನಡೆಸುತ್ತಿದೆಯೆಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News