ಇಸ್ತಾಂಬುಲ್: 17ನೇ ಶತಮಾನದ ಮಸೀದಿಯಲ್ಲಿ ಬೆಂಕಿ ಅನಾಹುತ
Update: 2020-11-15 23:49 IST
ಇಸ್ತಾಂಬುಲ್,ಅ.15: ಇಸ್ತಾಂಬುಲ್‌ನ ಮರದಿಂದ ನಿರ್ಮಿತವಾದ ಐತಿಹಾಸಿಕ ಮಸೀದಿಯಲ್ಲಿ ಆದಿತ್ಯವಾರ ಅಗ್ನಿ ಅನಾಹುತ ಸಂಭವಿಸಿದೆ. ಮಸೀದಿಗೆ ತಗಲಿರುವ ಬೆಂಕಿಯನ್ನು ನಂದಿಸಲು ಭಾರೀ ಸಂಖ್ಯೆಯ ಅಗ್ನಿಶಾಮಕದಳದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ವಾನಿಕೊಯ್ ಮಸೀದಿ 17ನೇ ಶತಮಾನದ್ದಾಗಿದ್ದು, ಒಟ್ಟೋಮನ್ ಸುಲ್ತಾನ್ ನಾಲ್ಕನೆ ಮುಹಮ್ಮದ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಗಿತ್ತು. ಬೊಸ್ಪುರಸ್ ಜಲಸಂಧಿಗೆ ತಾಗಿಕೊಂಡಿರುವ ಈ ಮಸೀದಿಯು ಇಸ್ತಾಂಬುಲ್‌ನ ಏಶ್ಯ ಭಾಗದಲ್ಲಿದೆ. ಮಸೀದಿಗೆ ತಗಲಿಕೊಂಡಿರುವ ಬೆಂಕಿಯು ಹಿಂಭಾಗದಲ್ಲಿರುವ ಕಾಡು ಪ್ರದೇಶ ಮತ್ತು ಸುತ್ತುಮುತ್ತಲಿನ ಮನೆಗಳಿಗೆ ಹರಡದಂತೆಯೂ ಅಗ್ನಿಶಾಮಕದಳದ ಸಿಬ್ಬಂದಿ ಯತ್ನಿಸುತ್ತಿದ್ದಾರೆ.
ಏಕ ಗೋಪುರವನ್ನು ಹೊಂದಿರುವ ಈ ಮಸೀದಿಯು ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿದೆ. ಅಗ್ನಿ ದುರಂತಕ್ಕೆ ಕಾರಣವೇನೆಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲವೆಂದು ಮೂಲಗಳು ತಿಳಿಸಿವೆ.