ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ಮೋದಿ ಸರಕಾರ ವಿರೋಧಿಸುತ್ತದೆ: ಅಮಿತ್ ಶಾ

Update: 2020-11-16 15:00 GMT

ಹೊಸದಿಲ್ಲಿ:  ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬರುವಲ್ಲಿ ನರೇಂದ್ರ ಮೋದಿ ಸರಕಾರ ಬದ್ಧವಾಗಿದೆ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವವರನ್ನು ವಿರೋಧಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನವೆಂಬರ್ 16ರಂದು ರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮಿತ್ ಶಾ ಮಾತನಾಡಿದರು.

“ನಮ್ಮ ದೇಶದ ಅಡಿಪಾಯವನ್ನು ಬಲಪಡಿಸಲು ನಮ್ಮ ಮಾಧ್ಯಮರಂಗವು ನಿರಂತರ ಕೆಲಸಗಳನ್ನು ಮಾಡುತ್ತಿದೆ” ಎಂದು ಶಾ ಹೇಳಿದ್ದು, ಕೊರೋನ ವೈರಸ್ ಬಗ್ಗೆ ಜಾಗೃತಿ ಹರಡಿದ್ದಕ್ಕಾಗಿ ಮಾಧ್ಯಮಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News