ನ್ಯೂಝಿಲ್ಯಾಂಡ್ ನಲ್ಲಿ ಹಿಜಾಬ್ ಧರಿಸಿದ ಪ್ರಪ್ರಥಮ ಮಹಿಳಾ ಪೊಲೀಸ್ ಝೀನ ಅಲಿ
Update: 2020-11-17 23:42 IST
ದುಬೈ: ಮೂವತ್ತರ ವಯಸ್ಸಿನ ಝೀನಾ ಅಲಿ ನ್ಯೂಝಿಲ್ಯಾಂಡ್ ನಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಿರುವ ಮೊತ್ತ ಮೊದಲ ಮಹಿಳಾ ಪೊಲೀಸ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫಿಜಿಯಲ್ಲಿ ಜನಿಸಿರುವ ಝೀನ ಅಲಿ ಚಿಕ್ಕವರಿದ್ದಾಗಲೇ ತನ್ನ ಕುಟುಂಬದ ಜೊತೆಯಲ್ಲಿ ನ್ಯೂಝಿಲ್ಯಾಂಡ್ ಗೆ ವಲಸೆ ಬಂದಿದ್ದರು.
ಹಿಜಾಬ್ ಕುರಿತು ತನ್ನ ಅನಿಸಿಕೆ ವ್ಯಕ್ತಪಡಿಸಿದ ಝೀನಾ, ದೇಶ ಸೇವೆಯ ವೇಳೆ ತನ್ನ ನಂಬಿಕೆಯನ್ನು ಅನುಸರಿಸಲು ತನಗೆ ಸಾಧ್ಯವಾಗಿದೆ. ತನ್ನ ಹಿಜಾಬ್ ವಿನ್ಯಾಸಕ್ಕೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು.