ಕರಾಚಿ ಕಿಂಗ್ಸ್ ಪಾಕಿಸ್ತಾನ ಸೂಪರ್ ಲೀಗ್ ಚಾಂಪಿಯನ್

Update: 2020-11-18 07:05 GMT

ಕರಾಚಿ:ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪೈಕಿ ಒಬ್ಬರಾಗಿರುವ ಬಾಬರ್ ಆಝಂ ಸಿಡಿಸಿದ ಅರ್ಧ ಶತಕದ ನೆರವಿನಿಂದ ಕರಾಚಿ ಕಿಂಗ್ಸ್ ಮಂಗಳವಾರ ನಡೆದ ಫೈನಲ್ ನಲ್ಲಿ ಲಾಹೋರ್ ಖ್ವಾಲಾಂಡರ್ಸ್ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ. ಈ ಮೂಲಕ ಮೊದಲ ಬಾರಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ ಎಲ್)ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಝಂ49 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 63 ರನ್ ಗಳಿಸಿದರು. ನಾಯಕ ಇಮಾದ್ ವಸೀಂ ಗೆಲುವಿನ ಬೌಂಡರಿ ಬಾರಿಸಿ ಕಿಂಗ್ಸ್ ತಂಡ 18.4 ಓವರ್ ಗಳಲ್ಲಿ 135 ರನ್ ಗುರಿ ತಲುಪಲು ನೆರವಾದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಲಾಹೋರ್ ತಂಡ 7 ವಿಕೆಟ್ ನಷ್ಟಕ್ಕೆ ಕೇವಲ 134 ರನ್ ಗಳಿಸಿತು.,

ಟ್ವೆಂಟಿ-20 ಕ್ರಿಕೆಟ್ ನಲ್ಲಿ ವಿಶ್ವದ ನಂ.2ನೇ ಬ್ಯಾಟ್ಸ್ ಮನ್ ಆಗಿರುವ ಆಝಮ್ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾಧರು.

ಫೆಬ್ರವರಿ 20ರಂದು ಐದನೇ ಆವೃತ್ತಿಯ ಪಿಎಸ್ ಎಲ್ ಆರಂಭವಾಗಿತ್ತು.  ಕಿಂಗ್ಸ್ ಪರ ಆಡುತ್ತಿದ್ದ ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೇಲ್ಸ್ ಅವರಿಗೆ ಕೋವಿಡ್-19 ಸೋಂಕು ತಗಲಿದ ಕಾರಣ 34 ಪಂದ್ಯಗಳ ಪೈಕಿ 30 ಪಂದ್ಯಗಳು ರದ್ದಾದವು.

ಶನಿವಾರದಿಂದ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ ಪಂದ್ಯದ ಮೂಲಕ ಟೂರ್ನಿ ಮತ್ತೆ ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News