ಇರಾಕ್, ಅಫ್ಘಾನ್‌ನಿಂದ ಅಮೆರಿಕ ಸೈನಿಕರ ವಾಪಸಾತಿ: ಅಮೆರಿಕ ಘೋಷಣೆ

Update: 2020-11-18 17:11 GMT

ವಾಶಿಂಗ್ಟನ್, ನ. 18: ವಿದೇಶಗಳಲ್ಲಿನ ಯುದ್ಧಗಳನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ ಬಳಿಕ, ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿರುವ ಅಮೆರಿಕ ಸೈನಿಕರ ಸಂಖ್ಯೆಯನ್ನು 20 ವರ್ಷಗಳ ಅವಧಿಯಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಸಲು ಅಮೆರಿಕ ಮುಂದಾಗಿದೆ.

ಅಫ್ಘಾನಿಸ್ತಾನದಿಂದ ಜನವರಿ 15ರ ವೇಳೆಗೆ ಸುಮಾರು 2,000 ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಮಂಗಳವಾರ ಘೋಷಿಸಿದರು.

ಅದೇ ವೇಳೆ, ಪ್ರಸ್ತಾಪಿತ ಸೇನಾ ಹಿಂದೆಗೆತವು ಅಮೆರಿಕವು ಸುಮಾರು ಎರಡು ದಶಕಗಳ ಯುದ್ಧದಲ್ಲಿ ಸಾಧಿಸಿರುವುದನ್ನು ಕಳೆದುಕೊಳ್ಳಬಹುದು ಎಂಬ ಆತಂಕವನ್ನು ಅವರು ತಳ್ಳಿಹಾಕಿದರು.

ಇದೇ ದಿನಾಂಕದ ವೇಳೆಗೆ, ಇರಾಕ್‌ನಿಂದ 500 ಸೈನಿಕರು ಅಮೆರಿಕಕ್ಕೆ ವಾಪಸಾಗಲಿದ್ದಾರೆ. ವಾಪಸಾತಿಯ ಬಳಿಕ ಅಫ್ಘಾನಿಸ್ತಾನ ಮತ್ತು ಇರಾಕ್‌ಗಳಲ್ಲಿ 2,500 ಅವೆುರಿಕ ಸೈನಿಕರು ಉಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News