ಕ್ಲಿನಿಕಲ್ ಪ್ರಯೋಗಕ್ಕೆ ತೆರೆ; ಲಸಿಕೆ 95 ಶೇ. ಪರಿಣಾಮಕಾರಿ: ಫೈಝರ್

Update: 2020-11-18 17:50 GMT

ವಾಶಿಂಗ್ಟನ್, ನ. 18: ತನ್ನ ಪ್ರಾಯೋಗಿಕ ಕೋವಿಡ್-19 ಲಸಿಕೆಯು ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯ ಅಂತಿಮ ವಿಶ್ಲೇಷಣೆಯಲ್ಲಿ 95 ಶೇಕಡ ಪರಿಣಾಮಕಾರಿ ಎಂಬುದಾಗಿ ಸಾಬೀತಾಗಿದೆ ಎಂದು ಅಮೆರಿಕದ ಔಷಧ ತಯಾರಿಕಾ ಕ್ಷೇತ್ರದ ದೈತ್ಯ ಫೈಝರ್ ಕಂಪೆನಿ ಬುಧವಾರ ಹೇಳಿದೆ.

ತನ್ನ ಬಳಿ ಅಗತ್ಯ ಎರಡು ತಿಂಗಳ ಸುರಕ್ಷತಾ ಅಂಕಿಅಂಶಗಳಿದ್ದು, ಲಸಿಕೆ ಉತ್ಪಾದನೆಗೆ ತುರ್ತು ಅನುಮೋದನೆ ನೀಡುವಂತೆ ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಸುವುದಾಗಿ ಅದು ತಿಳಿಸಿದೆ.

ಜರ್ಮನಿಯ ಕಂಪೆನಿ ಬಯೋಎನ್‌ಟೆಕ್ ಎಸ್‌ಇ ಭಾಗೀದಾರಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಲಸಿಕೆಯ ಪರಿಣಾಮವು ಎಲ್ಲ ವಯೋ ಗುಂಪುಗಳು ಮತ್ತು ಜನಾಂಗೀಯ ಗುಂಪುಗಳಲ್ಲಿ ಸ್ಥಿರವಾಗಿದೆ ಹಾಗೂ ಪ್ರಮುಖ ಅಡ್ಡ ಪರಿಣಾಮಗಳೇನೂ ಇಲ್ಲ ಎಂದು ಫೈಝರ್ ಹೇಳಿದೆ. ಅಂದರೆ ಲಸಿಕೆಯನ್ನು ಜಗತ್ತಿನಾದ್ಯಂತ ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News