ಬ್ರಿಟನ್: 2030ರಿಂದ ಪೆಟ್ರೋಲ್, ಡೀಸೆಲ್ ವಾಹನ ನಿಷೇಧ

Update: 2020-11-18 17:53 GMT
file photo 

ಲಂಡನ್, ನ. 18: ಹಸಿರು ಕೈಗಾರಿಕಾ ಕ್ರಾಂತಿಗಾಗಿ ರೂಪಿಸಲಾಗಿರುವ 10 ಅಂಶಗಳ ಯೋಜನೆಯ ಭಾಗವಾಗಿ 2030ರಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಬ್ರಿಟನ್ ನಿಷೇಧಿಸಲಿದೆ.

ಯೋಜನೆಯ ಅನುಷ್ಠಾನಕ್ಕಾಗಿ ಬ್ರಿಟನ್ 12 ಬಿಲಿಯ ಪೌಂಡ್ (ಸುಮಾರು 1,18,260 ಕೋಟಿ ರೂಪಾಯಿ) ನಿಧಿಯನ್ನು ಮೀಸಲಿಡಲಿದೆ.

ಈ ಯೋಜನೆಯು 2,50,000 ಉದ್ಯೋಗ ಸೃಷ್ಟಿಸಲಿದೆ ಹಾಗೂ 2050ರ ವೇಳೆಗೆ ದೇಶವನ್ನು ಇಂಗಾಲ ಮುಕ್ತಗೊಳಿಸುವ ನಿಟ್ಟಿನಲ್ಲಿ ಮುನ್ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News