×
Ad

ಅವೆುರಿಕ: ಕಳೆದ ವರ್ಷ ಸಿಖ್, ಮುಸ್ಲಿಮರ ವಿರುದ್ಧದ ಅಪರಾಧ ಇಳಿಕೆ

Update: 2020-11-18 23:32 IST

ವಾಶಿಂಗ್ಟನ್, ನ. 18: ಅಮೆರಿಕದಲ್ಲಿ ಸಿಖ್ಖರ ಮೇಲೆ ನಡೆಯುವ ದ್ವೇಷಾಪರಾಧಗಳ ಸಂಖ್ಯೆಯಲ್ಲಿ 2019ರಲ್ಲಿ ಕೊಂಚ ಇಳಿಕೆಯಾಗಿದೆ ಎಂದು ದೇಶದಲ್ಲಿರುವ ಪ್ರಮುಖ ಸಿಖ್ ಸಂಘಟನೆ ‘ಸೌತ್ ಏಶ್ಯನ್ ಅವೆುರಿಕನ್ಸ್ ಲೀಡಿಂಗ್ ಟುಗೆದರ್ (ಎಸ್‌ಎಎಎಲ್‌ಟಿ) ಹೇಳಿದೆ.

2018ರಲ್ಲಿ ಸಿಖ್ಖರ ಮೇಲೆ ದಾಖಲೆ ಪ್ರಮಾಣದಲ್ಲಿ ದ್ವೇಷಾಪರಾಧ ನಡೆಸಲಾಗಿತ್ತು. ಆ ವರ್ಷ 1991ರ ಬಳಿಕ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ಖರ ಹತ್ಯೆ ನಡೆದಿತ್ತು ಎಂದು ಎಫ್‌ಬಿಐ ವರದಿಯೊಂದನ್ನು ಉಲ್ಲೇಖಿಸಿ ಅದು ತಿಳಿಸಿದೆ.

2019ರಲ್ಲಿ ಮುಸ್ಲಿಮ್ ವಿರೋಧಿ ಧೋರಣೆಯಿಂದ ನಡೆಸಲಾಗುವ ದ್ವೇಷಾಪರಾಧಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ ಎಂದು ಎಫ್‌ಬಿಐ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News