ಆಸ್ಟ್ರೇಲಿಯ ರಾಜ್ಯದಲ್ಲಿ 6 ದಿನಗಳ ಲಾಕ್‌ಡೌನ್
Update: 2020-11-18 23:35 IST
ಅಡಿಲೇಡ್ (ಆಸ್ಟ್ರೇಲಿಯ), ನ. 18: ಕೊರೋನ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಆಸ್ಟ್ರೇಲಿಯದ ಸೌತ್ ಆಸ್ಟ್ರೇಲಿಯ ರಾಜ್ಯವು ಬುಧವಾರ ಆರು ದಿನಗಳ ಲಾಕ್‌ಡೌನ್ ಘೋಷಿಸಿದೆ.
ರಾಜ್ಯವು ಹಲವು ತಿಂಗಳ ಕಾಲ ಕೊರೋನ ಮುಕ್ತ ಪ್ರದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ಎರಡನೇ ಅಲೆಯ ಸೋಂಕು ಪ್ರಕರಣಗಳು ವರದಿಯಾಗಿವೆ.
ಬುಧವಾರ ಮಧ್ಯರಾತ್ರಿಯಿಂದ ಮುಚ್ಚುವಂತೆ ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಹಾಗೂ ಮನೆಯಲ್ಲೇ ಇರುವಂತೆ ಜನರಿಗೆ ತಿಳಿಸಲಾಗಿದೆ.