ಪರಮಾಣು ಒಪ್ಪಂದಕ್ಕೆ ಮರಳಿ, ದಿಗ್ಬಂಧನ ತೆರವುಗೊಳಿಸಿ: ಅವೆುರಿಕಕ್ಕೆ ಇರಾನ್ ಒತ್ತಾಯ

Update: 2020-11-18 18:29 GMT

ಟೆಹರಾನ್ (ಇರಾನ್), ನ. 18: ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನಗಳನ್ನು ಅವೆುರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ತೆರವುಗೊಳಿಸಿದರೆ, 2015ರ ಪರಮಾಣು ಒಪ್ಪಂದವನ್ನು ಇರಾನ್ ಸಂಪೂರ್ಣವಾಗಿ ಅನುಷ್ಠಾನಗೊಳಿಸುವುದು ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಹೇಳಿದ್ದಾರೆ.

ಇರಾನ್ ಜಗತ್ತಿನ ಆರು ಪ್ರಭಾವಶಾಲಿ ದೇಶಗಳೊಂದಿಗೆ 2015ರಲ್ಲಿ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು.

ಒಪ್ಪಂದದ ಅಂಶಗಳನ್ನು ಇರಾನ್ ಸಂಪೂರ್ಣವಾಗಿ ಅನುಸರಿಸಿದರೆ ಐತಿಹಾಸಿಕ ಪರಮಾಣು ಒಪ್ಪಂದಕ್ಕೆ ಅಮೆರಿಕ ಮರಳುವುದಾಗಿ ಬೈಡನ್ ಈಗಾಗಲೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News