ವೃದ್ಧರಲ್ಲಿ ರೋಗನಿರೋಧಕ ವ್ಯವಸ್ಥೆ ಸೃಷ್ಟಿಸಿದ ಆಕ್ಸ್‌ಫರ್ಡ್ ಲಸಿಕೆ

Update: 2020-11-19 16:11 GMT

ಲಂಡನ್, ನ. 19: ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಾಝೆನೆಕ ಜೊತೆಗೆ ತಾನು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್-19 ಲಸಿಕೆಯು ವೃದ್ಧರಲ್ಲಿ ಬಲಿಷ್ಠ ರೋಗನಿರೋಧಕ ವ್ಯವಸ್ಥೆಯನ್ನು ಸೃಷ್ಟಿಸಿರುವುದು ಆರಂಭಿಕ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ತಿಳಿಸಿದೆ. ಅದರ ಅಂತಿಮ ಹಂತದ ಪ್ರಾಯೋಗಿಕ ಪರೀಕ್ಷೆಗಳ ವಿವರಗಳು ಮುಂದಿನ ವಾರಗಳಲ್ಲಿ ಹೊರಬರುವ ನಿರೀಕ್ಷೆಯಿದೆ.

ಪ್ರಾಯೋಗಿಕ ಲಸಿಕೆಯು ವೃದ್ಧರಲ್ಲಿ ಬಲಿಷ್ಠ ರೋಗನಿರೋಧಕ ವ್ಯವಸ್ಥೆಯನ್ನು ಸೃಷ್ಟಿಸಿರುವುದನ್ನು ಇತ್ತೀಚಿನ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾದ ಪ್ರಾಥಮಿಕ ಅಂಕಿ ಅಂಶಗಳು ತೋರಿಸಿವೆ ಎಂದು ವೈದ್ಯಕೀಯ ಪತ್ರಿಕೆ ‘ಲ್ಯಾನ್ಸೆಟ್’ನಲ್ಲಿ ಗುರುವಾರ ಪ್ರಕಟಗೊಂಡ ಲೇಖನವೊಂದು ತಿಳಿಸಿದೆ.

ಕೊರೋನ ವೈರಸ್‌ನಿಂದಾಗಿ ಹೆಚ್ಚಾಗಿ ವೃದ್ಧರು ತೀವ್ರ ಕಾಯಿಲೆಗೆ ಒಳಗಾಗುತ್ತಾರೆ ಹಾಗೂ ಅವರು ಸಾಯುವ ಪ್ರಮಾಣ ಹೆಚ್ಚಾಗಿದೆ.

ಅಂತಿಮ ಹಂತದ ಪ್ರಾಯೋಗಿಕ ಪರೀಕ್ಷೆಗಳ ವಿವರಗಳನ್ನು ಆಕ್ಸ್‌ಫರ್ಡ್ ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ. ಈಗಾಗಲೇ ಫೈಝರ್ ಮತ್ತು ಮೋಡರ್ನಾ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳ ಮಾನದಂಡಕ್ಕೆ ಆಕ್ಸ್‌ಫರ್ಡ್ ಲಸಿಕೆ ಸಾಟಿಯಾಗುತ್ತದೆಯೇ ಎನ್ನುವುದು ಆಗಷ್ಟೇ ಗೊತ್ತಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News