ಒಬಾಮ ಆತ್ಮಚರಿತ್ರೆಯ 8.9 ಲಕ್ಷ ಪ್ರತಿ ಒಂದೇ ದಿನದಲ್ಲಿ ಮಾರಾಟ

Update: 2020-11-19 16:33 GMT

ವಾಶಿಂಗ್ಟನ್, ನ. 19: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮರ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ನ ಸುಮಾರು 8.9 ಲಕ್ಷ ಪ್ರತಿಗಳು ಅಮೆರಿಕ ಮತ್ತು ಕೆನಡಗಳಲ್ಲಿ ಮೊದಲ 24 ಗಂಟೆಗಳಲ್ಲಿ ಮಾರಾಟವಾಗಿವೆ. ಈ ಪುಸ್ತಕವು ಆಧುನಿಕ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮಾರಾಟವಾದ ಅಧ್ಯಕ್ಷರ ಆತ್ಮಚರಿತ್ರೆಯಾಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.

ಪುಸ್ತಕವೊಂದರ ಇಷ್ಟು ದೊಡ್ಡ ಸಂಖ್ಯೆಯ ಪ್ರತಿಗಳು ಮಾರಾಟವಾಗಿರುವುದು ಪ್ರಕಾಶಕ ಪೆಂಗ್ವಿನ್ ರ್ಯಾಂಡಮ್ ಹೌಸ್‌ಗೂ ಒಂದು ದಾಖಲೆಯಾಗಿದೆ.

ಈ ಸಂಖ್ಯೆಯಲ್ಲಿ ಮುಂಚಿತವಾಗಿ ಕಾದಿರಿಸಲಾದ ಪ್ರತಿಗಳು ಮತ್ತು ಮೊದಲ ದಿನ ಮಾರಾಟವಾದ ಪ್ರತಿಗಳು ಸೇರಿವೆ.

ಬರಾಕ್ ಒಬಾಮರ ಪತ್ನಿ ಮಿಶೆಲ್ ಒಬಾಮರ ಆತ್ಮಚರಿತ್ರೆ ‘ಬಿಕಮಿಂಗ್’ ಎರಡು ವರ್ಷಗಳ ಹಿಂದೆ ಪ್ರಕಟಗೊಂಡಿದೆ. ಅದರ 1.4 ಕೋಟಿ ಪ್ರತಿಗಳು ಮಾರಾಟವಾಗಿವೆ.

 ಪೆಂಗ್ವಿನ್ ಕಂಪೆನಿಯು 2017ರಲ್ಲಿ ಆತ್ಮಚರಿತ್ರೆಗಳಿಗಾಗಿ ಒಬಾಮ ದಂಪತಿಯೊಂದಿಗೆ 65 ಮಿಲಿಯ ಡಾಲರ್ (ಸುಮಾರು 480 ಕೋಟಿ ರೂಪಾಯಿ) ಕರಾರಿಗೆ ಸಹಿ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News