ಸ್ಕಾಟಿಶ್ ಲೇಖಕ ಡಗ್ಲಾಸ್ ಸ್ಟುವರ್ಟ್‌ಗೆ ಬೂಕರ್ ಪ್ರಶಸ್ತಿ

Update: 2020-11-20 17:35 GMT
ಫೋಟೊ ಕೃಪೆ: Doug_D_Stuart/Twitter

ಲಂಡನ್, ನ. 20: 2020ರ ಸಾಲಿನ ‘ಬೂಕರ್ ಪ್ರಶಸ್ತಿ’ಯನ್ನು ಸ್ಕಾಟ್‌ಲ್ಯಾಂಡ್ ಲೇಖಕ ಡಗ್ಲಾಸ್ ಸ್ಟುವರ್ಟ್‌ಗೆ ನೀಡಲಾಗಿದೆ. ಅವರ ಚೊಚ್ಚಲ ಕಾದಂಬರಿ ‘ಶಗೀ ಬೈನ್’ಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ.

1980ರ ದಶಕದ ಉದ್ಯೋಗಸ್ಥ ಕುಟುಂಬವೊಂದರ ಸುತ್ತ ಹೆಣೆಯಲಾದ ಕತೆಯನ್ನೊಳಗೊಂಡ ಕಾದಂಬರಿ ಇದಾಗಿದ್ದು, ಲೇಖಕರು ತನ್ನ ಬಾಲ್ಯವನ್ನೇ ಇಲ್ಲಿ ನೆನಪಿಸಿಕೊಂಡಿದ್ದಾರೆ.

44 ವರ್ಷದ ಡಗ್ಲಾಸ್ ಸ್ಟುವರ್ಟ್ ಈಗ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.

ಬ್ರಿಟನ್‌ನಲ್ಲಿ ಕೊರೋನ ವೈರಸ್ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಆನ್‌ಲೈನ್ ಮೂಲಕ ಪ್ರಶಸ್ತಿಯನ್ನು ಘೋಷಿಸಲಾಯಿತು. ಆರು ಮಂದಿ ಪ್ರಶಸ್ತಿ ಸಂಭಾವ್ಯರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದವರು ತಮ್ಮ ಮನೆಗಳಲ್ಲಿಯೇ ಕಾರ್ಯಕ್ರಮವನ್ನು ವೀಕ್ಷಿಸಿದರು.

ಪ್ರಶಸ್ತಿಯು 66,000 ಡಾಲರ್ (ಸುಮಾರು 49 ಲಕ್ಷ ರೂಪಾಯಿ) ನಗದು ಪುರಸ್ಕಾರವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News