ಡೊನಾಲ್ಡ್ ಟ್ರಂಪ್ ಹಿರಿಯ ಪುತ್ರನಿಗೆ ಕೊರೋನ ಪಾಸಿಟಿವ್

Update: 2020-11-21 07:23 GMT

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್‌ಗೆ ಕೋವಿಡ್-19 ಸೋಂಕ ತಗಲಿರುವುದು ದೃಢಪಟ್ಟಿದೆ. ಕೊರೋನದ ಯಾವುದೇ ಗುಣಲಕ್ಷಣವಿಲ್ಲದ ಟ್ರಂಪ್ ಜೂನಿಯರ್ ಇದೀಗ ಕ್ವಾರಂಟೈನ್‌ನಲ್ಲಿದ್ದಾರೆ.

ಟ್ರಂಪ್ ಜೂನಿಯರ್‌ಗೆ ಕೊರೋನದ ಯಾವುದೆ ಗುಣಲಕ್ಷಣವಿರಲಿಲ್ಲ. ಅವರು ವೈದ್ಯಕೀಯವಾಗಿ ಶಿಫಾರಸು ಗೊಂಡಿರುವ ಎಲ್ಲ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದರು ಎಂದು ಅವರ ವಕ್ತಾರರು ಹೇಳಿದ್ದಾರೆ.

ಟ್ರಂಪ್ ಅವರ ತಂದೆ ಡೊನಾಲ್ಡ್ ಟ್ರಂಪ್‌ಗೂ ಈ ಹಿಂದೆ ಕೊರೋನ ವೈರಸ್ ಸೋಂಕು ತಗಲಿತ್ತು. ಆಗ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News