ಆಸ್ಟ್ರೇಲಿಯನ್ ಓಪನ್ ವಿಳಂಬ ವರದಿಯನ್ನು ತಳ್ಳಿಹಾಕಿದ ಸಂಘಟಕರು

Update: 2020-11-21 17:47 GMT

 ಮೆಲ್ಬೋರ್ನ್, ನ.21: ದೇಶದಲ್ಲಿ ಕೋವಿಡ್-19 ಶಿಷ್ಟಾಚಾರಗಳ ಕಾರಣದಿಂದಾಗಿ ಆಸ್ಟ್ರೇಲಿಯನ್ ಓಪನ್ ಮುಂದಿನ ಜನವರಿಯಿಂದ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಆರಂಭವಾಗಲಿದೆ ಎಂದು ಮಾಧ್ಯಮ ವರದಿಗಳನ್ನು ಟೆನಿಸ್ ಆಸ್ಟ್ರೇಲಿಯ (ಟಿಎ) ಶನಿವಾರ ತಳ್ಳಿಹಾಕಿದೆ.

 ವಿಕ್ಟೋರಿಯ ರಾಜ್ಯ ಸರಕಾರದೊಂದಿಗೆ ಸಂಘಟಕರು ಸಂಪರ್ಕತಡೆಯನ್ನು ಏರ್ಪಡಿಸುವ ಬಗ್ಗೆ ಚರ್ಚಿಸುತ್ತಿದ್ದರೂ ಸಹ ವರ್ಷದ ಮೊದಲ ಗ್ರಾನ್ ಸ್ಲಾಮ್ ಮುಂದೂಡಲ್ಪಡುವ ಅಪಾಯವಿದೆ ಎಂದು ಹೆರಾಲ್ಡ್ ಸನ್ ಪತ್ರಿಕೆ ವರದಿ ಮಾಡಿದೆ.

‘‘ಇದು ಊಹಾಪೋಹ’’ ಎಂದು ಟಿಎ ವಕ್ತಾರರು ಹೇಳಿದರು.

 ವಿಕ್ಟೋರಿಯ ಪ್ರಧಾನ ಮಂತ್ರಿ ಡೇನಿಯಲ್ ಆ್ಯಂಡ್ರೋಸ್ ಅವರು ಗ್ರಾನ್ ಸ್ಲಾಮ್ ಆತಿಥ್ಯ ವಹಿಸುವ ಬಗ್ಗೆ ತುಂಬಾ ವಿಶ್ವಾಸದಲ್ಲಿದ್ದಾರೆ ಎಂದು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ನಿಖರವಾದ ಸಮಯ ಮತ್ತು ವ್ಯವಸ್ಥೆಗಳು ಇನ್ನೂ ಇತ್ಯರ್ಥಗೊಂಡಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News