ಟಿಆರ್‌ಪಿ ಹಗರಣ: ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಈ.ಡಿ

Update: 2020-11-21 17:54 GMT

ಮುಂಬೈ, ನ. 21: ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಟಿಆರ್‌ಪಿ ತಿರುಚಿದ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.) ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ನಿಯಮದ ಅಡಿಯಲ್ಲಿ ಪೊಲೀಸರ ಎಫ್‌ಐಆರ್‌ಗೆ ಸರಿಸಮಾನವಾದ ಇಸಿಐಆರ್ (ಜಾರಿ ನಿರ್ದೇಶನ ಪ್ರಕರಣದ ಮಾಹಿತಿ ವರದಿ)ಅನ್ನು ಜಾರಿ ನಿರ್ದೇಶನಾಲಯ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ.

 ಮುಂಬೈ ಪೊಲೀಸರು ಅಕ್ಟೋಬರ್‌ನಲ್ಲಿ ಸಲ್ಲಿಸಿದ ಎಫ್‌ಐಆರ್ ಅನ್ನು ಅಧ್ಯಯನ ನಡೆಸಿದ ಬಳಿಕ ಜಾರಿ ನಿರ್ದೇಶನಾಲಯ ಇಸಿಐಆರ್ ಅನ್ನು ದಾಖಲಿಸಿದೆ. ಈ ವಿಷಯದ ಕುರಿತಂತೆ ಪೊಲೀಸರು ರಿಪಬ್ಲಿಕ್ ಟಿವಿ, ಎರಡು ಮರಾಠಿ ವಾಹಿನಿಗಳು ಹಾಗೂ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿದೆ.

ರಿಪಬ್ಲಿಕ್ ಟಿವಿ ಹಾಗೂ ಇತರ ಆರೋಪಿಗಳು ಟಿಆರ್‌ಪಿ ಬದಲಾಯಿಸಿರುವುದು ಹಾಗೂ ತಪ್ಪೆಸಗಿರುವುದನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News