ಮೊದಲ ಆವೃತ್ತಿಯ ತುಂಬೆ ಫುಟ್ಬಾಲ್ ಲೀಗ್-2020: ವಮೋಸ್ ಯುನೈಟೆಡ್ ಎಫ್ ಸಿ ಚಾಂಪಿಯನ್

Update: 2020-11-21 18:16 GMT

ಅಜ್ಮಾನ್ : ಕೆಲವು ಫುಟ್ಬಾಲ್ ಅಭಿಮಾನಿಗಳಿಂದ ಆರಂಭಿಸಲ್ಪಟ್ಟಿರುವ, ಬಾಡಿ ಆ್ಯಂಡ್ ಸೋಲ್ ಹೆಲ್ತ್ ಕ್ಲಬ್ ನ ಬೆಂಬಲದೊಂದಿಗೆ ಉತ್ತರ ಯುಎಇ ನಲ್ಲಿ ಇದೇ ಮೊದಲ ಬಾರಿ ತುಂಬೆ ಫುಟ್ಬಾಲ್ ಲೀಗ್-2020ರ ಮೊದಲ ಆವೃತ್ತಿಯನ್ನು ಮುಖ್ಯ ಅತಿಥಿ ಡಾ. ತುಂಬೆ ಮೊಯ್ದಿನ್ ಅಧಿಕೃತವಾಗಿ ಉದ್ಘಾಟನೆ ಮಾಡಿದರು. ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರು ಸ್ಥಳೀಯ ಆಡಳಿತಾಧಿಕಾರಿಗಳು ರೂಪಿಸಿರುವ ಸಂಪೂರ್ಣ ಸುರಕ್ಷಿತ ಅಂತರದ ಮಾರ್ಗಸೂಚಿಗಳು ಹಾಗೂ ಸುರಕ್ಷಿತ ಶಿಷ್ಟಾಚಾರದೊಂದಿಗೆ ಲೀಗ್ ಉದ್ಘಾಟಿಸಿದರು.

ಮೊದಲ ಆವೃತ್ತಿಯ ತುಂಬೆ ಫುಟ್ಬಾಲ್ ಲೀಗ್ ನಲ್ಲಿ ನಾಲ್ಕು ತಂಡಗಳಾದ ತುಂಬೆ ವಾರಿಯರ್ಸ್ ಎಫ್ ಸಿ, ರೆಡ್ ಅಮಿಗೊಸ್ ಎಫ್ ಸಿ, ಬ್ಲಾಕ್ ಸ್ಟೋರ್ಮ್ ಎಫ್ ಸಿ,  ಹಾಗೂ ವಮೋಸ್ ಯುನೈಟೆಡ್ ಎಫ್ ಸಿ ಭಾಗವಹಿಸಿದ್ದವು.

ಅಲ್ ಜರ್ಫ್ ನ ತುಂಬೆ ಮೆಡ್ ಸಿಟಿಯಲ್ಲಿರುವ ತುಂಬೆ ಮೈದಾನದಲ್ಲಿ ನವೆಂಬರ್ 19ರಂದು ಲೀಗ್ ಆಡಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಲೀಗ್ ನ  ಫೈನಲ್ ಪಂದ್ಯವನ್ನು ಗೆದ್ದುಕೊಂಡ ವಮೋಸ್ ಯುನೈಟೆಡ್ ಎಫ್ ಸಿ ಈ ವರ್ಷದ ಚಾಂಪಿಯನ್ಸ್ ಲೀಗ್ ನ್ನು ತನ್ನದಾಗಿಸಿಕೊಂಡಿತು.  ತುಂಬೆ ಫುಟ್ಬಾಲ್ ಲೀಗ್ ರೋಲ್ಲಿಂಗ್ ಟ್ರೋಫಿಯಾಗಿದ್ದು, ಲೀಗ್ ಪ್ರತಿ ವರ್ಷವೂ ಆಡಲಾಗುತ್ತದೆ.

ನೈಜ ಕ್ರೀಡಾ ಪ್ರೇಮಿಯಾಗಿರುವ ತುಂಬೆ ಮೊಯ್ದಿನ್ ಆವರು ಲೀಗ್ ಪ್ರಾರಂಭಿಸಿರುವ ಎಲ್ಲ ಆಟಗಾರರಿಗೆ ಪ್ರೋತ್ಸಾಯಿಸಿದರು. ಮುಂದಿನ ವರ್ಷ ಕನಿಷ್ಠ 50 ತಂಡಗಳು ಭಾಗವಹಿಸುವಂತಾಗಲು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಟೂರ್ನಿಯ ಯಶಸ್ಸಿಗೆ ಕೊಡುಗೆ ನೀಡಿರುವ ವಿವಿಧ ಪ್ರೋತ್ಸಾಹಕರಿಗೆ ಮೆಚ್ಚುಗೆ ಪ್ರಶಸ್ತಿಯನ್ನು ಮೊಯ್ದಿನ್ ನೀಡಿದರು.ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲ ತಂಡಗಳು ಹಾಗೂ ನಾಯಕರಿಗೆ ಅಭಿನಂದಿಸಿದರು. ಸುರಕ್ಷಿತ ಹಾಗೂ ಯಶಸ್ವಿ ಫುಟ್ಬಾಲ್ ಲೀಗ್ ಗಾಗಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News