ವಿಶ್ವದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 13.79 ಲಕ್ಷಕ್ಕೇರಿಕೆ

Update: 2020-11-22 18:13 GMT

ವಾಶಿಂಗ್ಟನ್,ನ.22: ಕೋವಿಡ್-19 ಸಾಂಕ್ರಾಮಿಕದ ಅಟ್ಟಹಾಸ ಮುಂದುವರಿದಿದ್ದು, ಜಗತ್ತಿನಾದ್ಯಂತ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಶನಿವಾರ 13,79,839ಕ್ಕೇರಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ವಿಶ್ವದಾದ್ಯಂತ ಕೊರೋನ ಸೋಂಕಿನಿಂದ ಈವರೆಗೆ 3,71,70,883 ಮಂದಿ ಚೇತರಿಸಿಕೊಂಡಿದ್ದಾರೆಂದು ಅವು ಹೇಳಿವೆ.

 ಜಗತ್ತಿನಲ್ಲೇ ಅಮೆರಿಕವು ಕೋವಿಡ್-19 ಸಾಂಕ್ರಾಮಿಕದಿಂದ ಅತ್ಯಧಿಕವಾಗಿ ಬಾಧಿತವಾದ ದೇಶವಾಗಿದ್ದು, ಅಲ್ಲಿ ಈವರೆಗೆ 12.88 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದೆ ಹಾಗೂ ಒಟ್ಟು 2,55,830 ಮಂದಿ ಸಾವನ್ನಪ್ಪಿದ್ದಾರೆ.

ಅತ್ಯಧಿಕ ಕೋವಿಡ್-19 ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ ಹಾಗೂ ಬ್ರೆಝಿಲ್ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ. ಭಾರತದಲ್ಲಿ 90,50,597 ಹಾಗೂ ಬ್ರೆಝಿಲ್‌ನಲ್ಲಿ 60,52,786 ಪ್ರಕರಣಗಳು ವರದಿಯಾಗಿವೆ.

 ಆದಾಗ್ಯೂ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಜನರು ಕೋವಿಡ್-19ನಿಂದ ಚೇತರಿಸಿಕೊಂಡಿದ್ದು, ಅಲ್ಲಿ ಈವರೆಗೆ 84,78,124 ಮಂದಿ ಗುಣಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News