ಅವೆುರಿಕ ತನ್ನ ಮೊದಲಿನ ದಾರಿಗೆ ಮರಳಿದೆ: ನಿಯೋಜಿತ ಅಧ್ಯಕ್ಷ ಜೋ ಬೈಡನ್

Update: 2020-11-25 17:45 GMT

ವಿಲ್ಮಿಂಗ್ಟನ್ (ಅಮೆರಿಕ), ನ. 25: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮಂಗಳವಾರ ತನ್ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶ ನೀತಿ ತಂಡಕ್ಕೆ ಹಲವಾರು ಹಿರಿಯ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರನ್ನು ನೇಮಿಸಿದ್ದಾರೆ ಹಾಗೂ ‘‘ಅಮೆರಿಕ ಈಗ ತನ್ನ ಮೊದಲಿನ ದಾರಿಗೆ ಮರಳಿದೆ ಹಾಗೂ ಜಗತ್ತನ್ನು ಮುನ್ನಡೆಸಲು ಸಿದ್ಧವಾಗಿದೆ’’ ಎಂದಿದ್ದಾರೆ.

ಡೆಲಾವೇರ್ ರಾಜ್ಯದ ವಿಲ್ಮಿಂಗ್ಟನ್ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ 78 ವರ್ಷದ ಬೈಡನ್, ವಿದೇಶ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಆಂತರಿಕ ಭದ್ರತಾ ಕಾರ್ಯದರ್ಶಿ, ಗುಪ್ತಚರ ಇಲಾಖೆ ಮುಖ್ಯಸ್ಥ, ವಿಶ್ವಸಂಸ್ಥೆ ರಾಯಭಾರಿ ಮತ್ತು ಪರಿಸರ ಬದಲಾವಣೆ ರಾಯಭಾರಿ ಹುದ್ದೆಗಳಿಗೆ ತನ್ನ ಆಯ್ಕೆಗಳನ್ನು ಪ್ರಕಟಿಸಿದರು.

‘‘ಇದು ನಮ್ಮ ದೇಶ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿಡುವ ತಂಡ’’ ಎಂದು ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News