ಇರಾನ್, ಅಮೆರಿಕ ಟ್ರಂಪ್‌ಗಿಂತ ಮೊದಲಿನ ಕಾಲಕ್ಕೆ ಮರಳಬಹುದು: ರೂಹಾನಿ

Update: 2020-11-25 18:07 GMT

 ಟೆಹರಾನ್ (ಇರಾನ್), ನ. 25: ಇರಾನ್ ಮತ್ತು ಅಮೆರಿಕಗಳು ಡೊನಾಲ್ಡ್ ಟ್ರಂಪ್‌ರ ನಾಲ್ಕು ವರ್ಷಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಸರಿಸಬಹುದಾಗಿದೆ ಹಾಗೂ ಅವರು ಅಧ್ಯಕ್ಷರಾಗುವುದಕ್ಕೆ ಮೊದಲಿದ್ದ ಪರಿಸ್ಥಿತಿಗೆ ಮರಳಬಹುದಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

ಜೋ ಬೈಡನ್‌ರ ಮುಂಬರುವ ಸರಕಾರಕ್ಕೆ ರಾಜಕೀಯ ಇಚ್ಛಾಶಕ್ತಿಯಿದ್ದರೆ, ಇರಾನ್-ಅವೆುರಿಕ ಸಂಬಂಧವು ಸಂಪೂರ್ಣವಾಗಿ ಭಿನ್ನವಾಗಬಹುದಾಗಿದೆ ಎಂದು ಬುಧವಾರ ಸಚಿವ ಸಂಪುಟವನ್ನು ಉದ್ದೇಶಿಸಿ ಮಾತನಾಡಿದ ರೂಹಾನಿ ಹೇಳಿದರು.

‘‘ತಾವು 2017 ಜನವರಿ 20ಕ್ಕಿಂತ ಮೊದಲಿದ್ದ ಪರಿಸ್ಥಿತಿಗಳಿಗೆ ಮರಳುವುದಾಗಿ ಇರಾನ್ ಮತ್ತು ಅಮೆರಿಕಗಳೆರಡೂ ನಿರ್ಧರಿಸಿ ಘೋಷಿಸಬಹುದಾಗಿದೆ’’ ಎಂದರು.

ಅಮೆರಿಕದ ಡೆಲಾವೇರ್ ರಾಜ್ಯದ ವಿಲ್ಮಿಂಗ್ಟನ್‌ನಲ್ಲಿನ ‘ಕ್ವೀನ್ ಥಿಯೇಟರ್’ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ನಿಯೋಜಿತ ಅಧ್ಯಕ್ಷ ಜೋ ಬೈಡನ್ ತನ್ನ ಮುಂಬರುವ ಸಚಿವ ಸಂಪುಟದ ಕೆಲವು ಸದಸ್ಯರನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News