ಹರ್ಯಾಣ: ಲವ್‌ ಜಿಹಾದ್ ಕುರಿತ ಕಾನೂನು ರೂಪಿಸಲು ತ್ರಿಸದಸ್ಯ ಸಮಿತಿ ರಚನೆ

Update: 2020-11-26 17:43 GMT

ಚಂಡೀಗಢ, ನ.26: ಹಿಂದು ಮಹಿಳೆಯರನ್ನು ವಿವಾಹ ಮಾಡಿಕೊಳ್ಳುವ ಮೂಲಕ ಮುಸ್ಲಿಮರು ಬಲವಂತವಾಗಿ ಮತಾಂತರಗೊಳಿಸುತ್ತಿದ್ದು ಇದೊಂದು ಲವ್‌ಜಿಹಾದ್ ಆಗಿದೆ ಎಂಬ ಬಲಪಂಥೀಯ ಹಿಂದು ಕಾರ್ಯಕರ್ತರ ಪ್ರತಿಪಾದನೆಯ ಹಿನ್ನೆಲೆಯಲ್ಲಿ, ಈ ಬಗ್ಗೆ ಕಾನೂನು ರೂಪಿಸಲು ಸರಕಾರ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ ಎಂದು ಹರ್ಯಾಣದ ಗೃಹಸಚಿವ ಅನಿಲ್ ವಿಜ್ ಗುರುವಾರ ಹೇಳಿದ್ದಾರೆ.

ಗೃಹ ಕಾರ್ಯದರ್ಶಿ ಟಿ.ಎಲ್ ಸತ್ಯಪ್ರಕಾಶ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ನವದೀಪ್ ವಿರ್ಕ್ ಮತ್ತು ಹೆಚ್ಚುವರಿ ಅಡ್ವಕೇಟ್ ಜನರಲ್ ದೀಪಕ್ ಮನ್‌ಚಂದ್ ಸಮಿತಿಯ ಸದಸ್ಯರಾಗಿದ್ದಾರೆ . ಇತರ ರಾಜ್ಯಗಳು ಈ ವಿಷಯದಲ್ಲಿ ಅಂಗೀಕರಿಸಿದ ಕಾನೂನನ್ನು ಸಮಿತಿ ಅಧ್ಯಯನ ನಡೆಸಲಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಲವ್‌ ಜಿಹಾದ್ ತಡೆಯುವ ಕಾನೂನಿನ ಸಾಂವಿಧಾನಿಕ ನ್ಯಾಯಬದ್ಧತೆಯ ಬಗ್ಗೆ ಸರಕಾರ ಪರಿಶೀಲಿಸುತ್ತಿದೆ ಎಂದು ನವೆಂಬರ್ 1ರಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News