ಇರಾನ್‌ನ ಹಿರಿಯ ಪರಮಾಣು ವಿಜ್ಞಾನಿಯ ಹತ್ಯೆ

Update: 2020-11-27 17:44 GMT
 ಫೋಟೊ ಕೃಪೆ: twitter.com 

ಟೆಹ್ರಾನ್, ಸೆ. 27: ಇರಾನ್‌ನ ಹಿರಿಯ ಪರಿಮಾಣು ವಿಜ್ಞಾನಿ ಮುಹ್ಸಿನ್ ಫಖ್ರಿಝಾದೆಹ್ ಅವರನ್ನು ಟೆಹ್ರಾನ್‌ನ ಸಮೀಪ ಶುಕ್ರವಾರ ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.

 ಪೂರ್ವ ಟೆಹ್ರಾನ್‌ನ ಉಪನಗರ ಆಬ್ಸಾರ್ದ್‌ನಲ್ಲಿ ಭಯೋತ್ಪಾದಕರು ಫಖ್ರಿಝಾದೆಹ್ ಅವರ ಕಾರಿನ ಮೇಲೆ ಮೇಲೆ ಗುಂಡಿನ ದಾಳಿ ನಡೆಸಿದರು. ಗಂಭೀರ ಗಾಯಗೊಂಡ ಫಖ್ರಿಝಾದೆಹ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಅದು ತಿಳಿಸಿದೆ.

ಫಖ್ರಿಝಾದೆಹ್ ಅವರ ಹತ್ಯೆಯನ್ನು ಸ್ಥಳೀಯಾಡಳಿತ ಹಲವು ಗಂಟೆಗಳ ಮುನ್ನವೇ ದೃಢಪಡಿಸಿತ್ತು. ಅಲ್ಲದೆ, ದಾಳಿಕೋರರಲ್ಲಿ ಹಲವರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿತ್ತು. ಆದರೆ ಫಖ್ರಿಝಾದೆಹ್ ಅವರ ಹತ್ಯೆಯ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡಲು ಇಸ್ರೇಲ್ ನಿರಾಕರಿಸಿದೆ. ಈ ಹಿಂದೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ‘‘ಆ ಹೆಸರು (ಫಖ್ರಿಝಾದೆಹ್) ನೆನಪಿಟ್ಟುಕೊಳ್ಳುವೆ’’ ಎಂದಿದ್ದರು.

ಫಖ್ರಿಝಾದೆಹ್ ಅವರು ಇಸ್ಲಾಮಿಕ್ ರಿಪಬ್ಲಿಕ್ ಸೇನಾ ಪರಮಾಣು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. 2000ದಲ್ಲಿ ಅವರು ಆ ಹುದ್ದೆಯನ್ನು ತೊರೆದಿದ್ದರು. ಕಳೆದ 10 ವರ್ಷಗಳಿಂದ ಇರಾನ್‌ನ ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿರಿಸಿ ಇಸ್ರೇಲ್ ಸರಣಿ ಹತ್ಯೆ ನಡೆಸುತ್ತಿದೆ ಎಂದು ಶಂಕಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News