ಆ್ಯಸ್ಟ್ರಾಝೆನೆಕ ಲಸಿಕೆ ಕದಿಯಲು ಉ.ಕೊರಿಯ ಕನ್ನ?

Update: 2020-11-27 17:54 GMT

ಲಂಡನ್, ನ. 27: ಬ್ರಿಟಿಶ್ ಔಷಧ ತಯಾರಿಕಾ ಸಂಸ್ಥೆ ಆ್ಯಸ್ಟ್ರಾಝೆನೆಕ ದ ಕಂಪ್ಯೂಟರ್ ವ್ಯವಸ್ಥೆಗೆ ಕನ್ನ ಹಾಕಲು ಶಂಕಿತ ಉತ್ತರ ಕೊರಿಯದ ಹ್ಯಾಕರ್‌ಗಳು ಇತ್ತೀಚಿನ ವಾರಗಳಲ್ಲಿ ಹಲವು ಬಾರಿ ಪ್ರಯತ್ನಿಸಿದ್ದಾರೆ ಎಂದು ಈ ಬಗ್ಗೆ ಮಾಹಿತಿಯುಳ್ಳ ಎರಡು ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಭಾಗೀದಾರಿಕೆಯೊಂದಿಗೆ ಆ್ಯಸ್ಟ್ರಾಝೆನೆಕ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳು ಅಂತಿಮ ಹಂತದಲ್ಲಿರುವ ಅವಧಿಯಲ್ಲಿ ಈ ಸೈಬರ್ ದಾಳಿ ನಡೆದಿದೆ.

ಹ್ಯಾಕರ್‌ಗಳು ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಆ್ಯಸ್ಟ್ರಝೆನೆಕ ಸಿಬ್ಬಂದಿಯನ್ನು ಉದ್ಯೋಗ ನೇಮಕಾತಿದಾರರ ಸೋಗಿನಲ್ಲಿ ಸಂಪರ್ಕಿಸಿ ಅವರಿಗೆ ನಕಲಿ ಉದ್ಯೋಗ ಕೊಡುಗೆಗಳನ್ನು ನೀಡಿದ್ದಾರೆ. ಬಳಿಕ ಅವರು ಕೆಲಸದ ವಿವರಗಳೆಂದು ಹೇಳಲಾದ ದಾಖಲೆಗಳನ್ನು ಕಳುಹಿಸಿದ್ದಾರೆ. ಆದರೆ, ಈ ದಾಖಲೆಗಳಲ್ಲಿ ಸಿಬ್ಬಂದಿಗಳ ಕಂಪ್ಯೂಟರ್‌ಗಳಿಗೆ ಪ್ರವೇಶ ಪಡೆಯಲು ರೂಪಿಸಲಾದ ಕಂಪ್ಯೂಟರ್ ಕೋಡ್‌ಗಳನ್ನು ತುರುಕಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News