ಅಫ್ಘಾನ್‌ನಲ್ಲಿ ಹತ್ಯೆ: 13 ಆಸ್ಟ್ರೇಲಿಯ ಸೈನಿಕರ ವಜಾಕ್ಕೆ ಕ್ಷಣಗಣನೆ

Update: 2020-11-27 18:13 GMT

ಸಿಡ್ನಿ (ಆಸ್ಟ್ರೇಲಿಯ), ನ. 27: ಅಫ್ಘಾನಿಸ್ತಾನದಲ್ಲಿ ಕಾನೂನುಬಾಹಿರ ಹತ್ಯೆಗಳನ್ನು ನಡೆಸಿರುವುದಕ್ಕಾಗಿ ಸೇವೆಯಿಂದ ವಜಾಗೊಳಿಸಲಾಗುವುದು ಎಂಬುದಾಗಿ ವಿಶೇಷ ಪಡೆಗಳ 13 ಸೈನಿಕರಿಗೆ ತಿಳಿಸಲಾಗಿದೆ ಎಂದು ಆಸ್ಟ್ರೇಲಿಯದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಿಕ್ ಬರ್ ಶುಕ್ರವಾರ ತಿಳಿಸಿದರು.

ಆಸ್ಟ್ರೇಲಿಯದ 19 ಸೈನಿಕರು ಅಫ್ಘಾನಿಸ್ತಾನದ 39 ನಿರಾಯುಧ ಕೈದಿಗಳು ಮತ್ತು ನಾಗರಿಕರನ್ನು ಕೊಂದಿದ್ದಾರೆ ಎನ್ನುವುದಕ್ಕೆ ಪುರಾವೆಯಿದೆ ಎಂದು ಕಳೆದ ವಾರ ಪ್ರಕಟಗೊಂಡ ಸ್ವತಂತ್ರ ವರದಿಯೊಂದು ತಿಳಿಸಿತ್ತು.

ಆದರೆ, ಸೈನಿಕರ ಹೆಸರುಗಳನ್ನು ವರದಿಯಲ್ಲಿ ಸೇರಿಸಲಾಗಿಲ್ಲ. ರಕ್ಷಣಾ ಇನ್ಸ್‌ಪೆಕ್ಟರ್ ಜನರಲ್ ನೇಮಿತ ನ್ಯಾಯಾಧೀಶರೊಬ್ಬರು ಆ ವರದಿಯನ್ನು ಬರೆದಿದ್ದಾರೆ. ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ 19 ಸೈನಿಕರ ವಿರುದ್ಧ ವಿಚಾರಣೆ ನಡೆಸುವಂತೆ ವರದಿಯು ಶಿಫಾರಸು ಮಾಡಿತ್ತು.

13 ಹಾಲಿ ಸೈನಿಕರಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಹಾಗೂ ಅಂತಿಮವಾಗಿ ಅವರು ವಜಾಗೊಳ್ಳಬಹುದು ಎಂದು ರಿಕ್ ಬರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News