ಅತ್ಯಾಚಾರಿಗಳ ಪುರುಷತ್ವ ಹರಣ ಅಧ್ಯಾದೇಶಕ್ಕೆ ಪಾಕ್ ಸಂಪುಟ ಸಮ್ಮತಿ
Update: 2020-11-27 23:46 IST
ಇಸ್ಲಾಮಾಬಾದ್ (ಪಾಕಿಸ್ತಾನ), ನ. 27: ಅತ್ಯಾಚಾರಿಗಳ ಪುರುಷತ್ವ ಹರಣಕ್ಕೆ ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ಅವಕಾಶ ನೀಡುವ ಎರಡು ಅಧ್ಯಾದೇಶಗಳಿಗೆ ಪಾಕಿಸ್ತಾನದ ಸಚಿವ ಸಂಪುಟ ಅಂಗೀಕಾರ ನೀಡಿದೆ ಎಂದು ‘ಡಾನ್ ನ್ಯೂಸ್’ ಶುಕ್ರವಾರ ವರದಿ ಮಾಡಿದೆ.
ಕಾನೂನು ಸಚಿವ ಫಾರೂಖ್ ನಸೀಮ್ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಸಮಿತಿಯೊಂದು ಅತ್ಯಾಚಾರ ನಿಗ್ರಹ (ತನಿಖೆ ಮತ್ತು ವಿಚಾರಣೆ) ಅಧ್ಯಾದೇಶ 2020 ಮತ್ತು ಕ್ರಿಮಿನಲ್ ಕಾನೂನು (ತಿದ್ದುಪಡಿ) ಅಧ್ಯಾದೇಶ 2020ಕ್ಕೆ ಅನುಮೋದನೆ ನೀಡಿತು.
ಈ ಅಧ್ಯಾದೇಶಗಳಿಗೆ ದೇಶದ ಕೇಂದ್ರ ಸಚಿವ ಸಂಪುಟ ಈಗಾಗಲೇ ಮಂಗಳವಾರ ಅನುಮೋದನೆ ನೀಡಿದೆ.