ಆನ್ ಲೈನ್ ನಲ್ಲಿ ಸ್ಟ್ರಾ, ಸಿಪ್ಪರ್ ಆರ್ಡರ್ ಮಾಡಿ ಎನ್ಐಎ ಕಚೇರಿ, ತಲೋಜಾ ಜೈಲಿಗೆ ಕಳುಹಿಸುತ್ತಿರುವ ನೆಟ್ಟಿಗರು!

Update: 2020-11-27 18:28 GMT

ಹೊಸದಿಲ್ಲಿ: ತಲೋಜಾ ಜೈಲಿನಲ್ಲಿರುವ ಹೋರಾಟಗಾರ ಸ್ಟ್ಯಾನ್ ಸ್ವಾಮಿಯವರಿಗಾಗಿ ತಾವು ಆನ್ ಲೈನ್ ನಲ್ಲಿ ಸ್ಟ್ರಾ ಮತ್ತು ಸಿಪ್ಪರ್ ಗಳನ್ನು ಆರ್ಡರ್ ಮಾಡಿರುವುದಾಗಿ ಹಲವರು ಟ್ವಿಟರ್ ನಲ್ಲಿ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ.

ಆರ್ಡರ್ ಗಳಲ್ಲಿ ಕೆಲವರು ಎನ್ ಐಎ ಕಚೇರಿ ಮತ್ತು ಇನ್ನೂ ಕೆಲವರು ತಲೋಜಾ ಜೈಲಿನ ವಿಳಾಸವನ್ನು ಬರೆದಿದ್ದಾರೆ.

ಸ್ಟ್ಯಾನ್ ಸ್ವಾಮಿಯವರಿಗೆ ಸ್ಟ್ರಾ ಮತ್ತು ಸಿಪ್ಪರ್ ಗಳನ್ನು ನೀಡುವುದಕ್ಕೆ ಎನ್ ಐಎ ನಿರಾಕರಿಸಿದ ಬಳಿಕ ಜನರು ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಆಕ್ರೋಶವನ್ನು ಹೊರಹಾಕಿದ್ದು, ಮುಂದಿನ ವಾರ ವಿಚಾರಣೆ ನಡೆಯುವ ಸಂದರ್ಭ ಇವುಗಳನ್ನು ಸ್ಟ್ಯಾನ್ ಸ್ವಾಮಿಯವರಿಗೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.

ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 8ರಂದು ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಲಾಗಿದ್ದು, ಸದ್ಯ ಅವರು ಮುಂಬೈ ಸಮೀಪದ ತಲೋಜಾ ಜೈಲಿನಲ್ಲಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಕಾರಣ ತನಗೆ ಸಿಪ್ಪರ್ ಮತ್ತು ಸ್ಟ್ರಾ ಬೇಕೆಂದು ಅವರು ಕೋರಿದ್ದರು. ಬಂಧನದ ಸಂದರ್ಭ ನಾವು ಸ್ಟ್ಯಾನ್ ಸ್ವಾಮಿಯವರಿಂದ ಯಾವುದೇ ಸ್ಟ್ರಾ ಅಥವಾ ಸಿಪ್ಪರ್ ಗಳನ್ನು ವಶಪಡಿಸಿಕೊಂಡಿಲ್ಲ ಎಂದು ಎನ್ ಐಎ ಗುರುವಾರ ಹೇಳಿತ್ತು.

November 27, 2020 Press Release The National Platform for the Rights of the Disabled (NPRD) expresses its outrage at...

Posted by Nprd India on Friday, 27 November 2020

NIA doesn't have a sipper-cup to give Fr. Stan Swamy who is being held in Taloja Prison. He's 83 yrs old, feeble & no...

Posted by Vishal Dadlani on Thursday, 26 November 2020

In a country where it is said ‘dushman ko bhi paani mana nahin karte’, here we are, denying an old man of our own...

Posted by Soumitra Karnik on Thursday, 26 November 2020

NIA told Special Court that it does not have a sipper/straw to provide to Father Stan Swamy, who's suffering from...

Posted by Aby Michael on Thursday, 26 November 2020

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News