'ಕಿಸಾನ್ ವಿರೋಧಿ ನರೇಂದ್ರ ಮೋದಿ' ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್

Update: 2020-11-28 13:41 GMT

ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್, ಹರ್ಯಾಣ, ರಾಜಸ್ಥಾನ, ಉತ್ತರಪ್ರದೇಶ ಹಾಗೂ ಕೇರಳದ ಸಾವಿರಾರು ರೈತರು ದಿಲ್ಲಿಯಲ್ಲಿ ಎರಡು ದಿನಗಳ ಪ್ರತಿಭಟನಾ ರ್ಯಾಲಿ ದಿಲ್ಲಿ ಚಲೋವನ್ನು ಹಮ್ಮಿಕೊಂಡಿದ್ದಾರೆ. ದಿಲ್ಲಿಯತ್ತ ತೆರಳುತ್ತಿದ್ದ ರೈತರನ್ನು ತಡೆಯಲು ಬಿಜೆಪಿ ಆಡಳಿತವಿರುವ ಹರ್ಯಾಣದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.

ರೈತರ ಪ್ರತಿಭಟನೆಗೆ ನಮ್ಮ ರಾಜ್ಯದ ರೈತರು ಜವಾಬ್ದಾರರಲ್ಲ. ಪಂಜಾಬ್ ಸರಕಾರವೇ ಇದಕ್ಕೆ ಜವಾಬ್ದಾರಿ ಎಂದು ಹರ್ಯಾಣದ ಸಿಎಂ ಮನೋಹರ್ ಲಾಲ್ ಖಟ್ಟರ್ ಆರೋಪಿಸಿದ್ದಾರೆ. ಆರೋಪ, ಪ್ರತ್ಯಾರೋಪದ ನಡುವೆ  ರಾಷ್ಟ ರಾಜಧಾನಿಯಲ್ಲಿ ರೈತರ ಭಾರೀ ಪ್ರತಿಭಟನೆಯ ಹಿನ್ನೆಲೆಯಲ್ಲಿ #किसान_विरोधी_नरेंद्र_मोदी (ಕಿಸಾನ್ ವಿರೋಧಿ ನರೇಂದ್ರ ಮೋದಿ) ಹ್ಯಾಶ್ ಟ್ಯಾಗ್ ಭಾರೀ ಟ್ರೆಂಡಿಂಗ್ ಆಗುತ್ತಿದೆ.

ನೋಡಿ ದೇಶದ ಇಬ್ಬರು ಪ್ರಧಾನಮಂತ್ರಿಗಳಿರುವ ವ್ಯತ್ಯಾಸ. ಮನಮೋಹನ್ ಸಿಂಗ್ ರೈತರೊಂದಿಗೆ ಕುಳಿತು ಅವರ ಸಮಸ್ಯೆಯನ್ನು ಆಲಿಸಿ, ಸಮಸ್ಯೆಯನ್ನು ಬಗೆಹರಿಸಿದರೆ, ಮತ್ತೊಂದೆಡೆ ನರೇಂದ್ರ ಮೋದಿ ಕೆಲವು ಕೈಗಾರಿಕೋದ್ಯಮಿಗಳೊಂದಿಗೆ ಮಾತ್ರ ಮಾತನಾಡುತ್ತಾರೆ. ರೈತರೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಇಆರ್. ಬಾಲಮುಕುಂದ್ ಮೀನಾ ಎಂಬುವವರು ಟ್ವೀಟಿಸಿದ್ದಾರೆ.

ಬಿಜೆಪಿಯ ಉದ್ದೇಶ ರೈತರ ಜೀವನವನ್ನು ಸರಳೀಕರಿಸುವುದು ಎಂದು ಪ್ರಧಾನಿ ಮೋದಿ ಅವರ ‘ಮನ್ ಕೀ ಬಾತ್’ ನಲ್ಲಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿರುವ ಸತ್ಯ ಠಾಕೂರ್ ಎಂಬುವವರು ಬಿಜೆಪಿಯ ಉದ್ದೇಶ ರೈತರನ್ನು ಸರ್ವನಾಶ ಮಾಡುವುದು ಎಂದು ಟ್ವೀಟಿಸಿದ್ದಾರೆ.

ಇದು ಬಿಜೆಪಿಯ ನಿಜವಾದ ಮುಖ. ಚುನಾವಣೆಗೆ ಮೊದಲು ಹಾಗೂ ಚುನಾವಣೆಯ ಬಳಿಕ ಎಂಬ ವಾಕ್ಯದ ಕೆಳಗೆ ಸಂಸದೆ ಹೇಮಾಮಾಲಿನಿ ಪೈರನ್ನು ಕೈಯ್ಯಲ್ಲಿ ಹಿಡಿದಿರುವುದು ಹಾಗೂ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸುವ ಫೋಟೊವನ್ನು ದೀಪಕ್ ಎಂಬುವವರು ಪೋಸ್ಟ್ ಮಾಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News