2021ರ ಮಧ್ಯದಲ್ಲಿ 10 ಕೋವಿಡ್ ಲಸಿಕೆಗಳು: ಜಾಗತಿಕ ಔಷಧ ತಯಾರಿಕಾ ಗುಂಪು

Update: 2020-11-28 15:58 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ನ. 28: ಸರಕಾರಗಳಿಂದ ಅಂಗೀಕಾರ ಲಭಿಸಿದರೆ ಮುಂದಿನ ವರ್ಷದ ಮಧ್ಯ ಭಾಗದ ವೇಳೆಗೆ 10 ಕೋವಿಡ್-19 ಲಸಿಕೆಗಳು ಲಭ್ಯವಾಗಲಿವೆ, ಆದರೆ ಅವುಗಳ ಸಂಶೋಧಕರಿಗೆ ಪೇಟೆಂಟ್ ರಕ್ಷಣೆ ಬೇಕಾಗಿದೆ ಎಂದು ಜಾಗತಿಕ ಔಷಧ ತಯಾರಿಕಾ ಉದ್ಯಮ ಗುಂಪು ಇಂಟರ್‌ ನ್ಯಾಶನಲ್ ಫೆಡರೇಶನ್ ಆಫ್ ಫಾರ್ಮಾಸ್ಯೂಟಿಕಲ್ಸ್ ಮ್ಯಾನುಫೇಕ್ಚರರ್ಸ್‌ ಆ್ಯಂಡ್ ಅಸೋಸಿಯೇಶನ್ಸ್ (ಐಎಫ್‌ಪಿಎಮ್‌ಎ)ನ ಮಹಾನಿರ್ದೇಶಕ ಥಾಮಸ್ ಕುಯೇನಿ ಶುಕ್ರವಾರ ಹೇಳಿದ್ದಾರೆ.

ಫೈಝರ್-ಬಯೋಎನ್‌ಟೆಕ್, ಮೋಡರ್ನಾ ಮತ್ತು ಆ್ಯಸ್ಟ್ರಝೆನೆಕ ಅಭಿವೃದ್ಧಿಪಡಿಸಿರುವ ಲಸಿಕೆಗಳು ಬೃಹತ್ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆದಾಯಕ ಫಲಿತಾಂಶಗಳನ್ನು ನೀಡಿವೆ, ಆದರೆ ಇವುಗಳಲ್ಲಿ ಯಾವುದೇ ಪ್ರಕ್ರಿಯೆಗಳನ್ನು ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

‘‘ಈವರೆಗೆ ನಾವು ಮೂರು ಲಸಿಕೆಗಳನ್ನು ಹೊಂದಿದ್ದೇವೆ. ಮೂರರ ಪೈಕಿ ಮೂರು ಕೂಡ ಯಶಸ್ವಿಯಾಗಿವೆ. ಇದೇ ರೀತಿಯ ಲಸಿಕೆಯನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಕೂಡ ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ. ನೋವಾವ್ಯಾಕ್ಸ್, ಸನೋಫಿ ಪ್ಯಾಶ್ಚರ್, ಜಿಎಸ್‌ಕೆ, ಮರ್ಕ್ ಮುಂತಾದ ಕಂಪೆನಿಗಳಿಂದಲೂ ನಾನು ಲಸಿಕೆಗಳನ್ನು ನಿರೀಕ್ಷಿಸುತ್ತಿದ್ದೇನೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News