ಇರಾನ್ ಜೊತೆ ವ್ಯವಹಾರ: ರಶ್ಯ, ಚೀನಾ ಕಂಪೆನಿಗಳಿಗೆ ಅಮೆರಿಕ ದಿಗ್ಬಂಧನ

Update: 2020-11-28 17:30 GMT

ವಾಶಿಂಗ್ಟನ್, ನ. 28: ಇರಾನ್‌ನ ಕ್ಷಿಪಣಿ ಕಾರ್ಯಕ್ರಮದ ಅಭಿವೃದ್ಧಿಗೆ ಬೆಂಬಲ ನೀಡಿವೆ ಎಂಬ ಆರೋಪದಲ್ಲಿ ಚೀನಾ ಮತ್ತು ರಶ್ಯದ ನಾಲ್ಕು ಕಂಪೆನಿಗಳ ವಿರುದ್ಧ ಅಮೆರಿಕ ಶುಕ್ರವಾರ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸಿದೆ.

ಈ ನಾಲ್ಕು ಕಂಪೆನಿಗಳು ಇರಾನ್‌ನ ಕ್ಷಿಪಣಿ ಕಾರ್ಯಕ್ರಮಕ್ಕೆ ಸೂಕ್ಷ್ಮ ತಂತ್ರಜ್ಞಾನ ಮತ್ತು ಸಾಮಗ್ರಿಗಳನ್ನು ಪೂರೈಸಿವೆ ಎಂದು ಅಮೆರಿಕ ಆರೋಪಿಸಿದೆ. ಅವುಗಳಿಗೆ ಅಮೆರಿಕ ಸರಕಾರದಿಂದ ಲಭಿಸುತ್ತಿರುವ ನೆರವುಗಳ ಮೇಲೆ ಮತ್ತು ಅವುಗಳ ರಫುಗಳ ಮೇಲೆ ಎರಡು ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗುವುದು ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News