ಕೃಷಿ ಕಾನೂನುಗಳನ್ನು ಮರು ಪರಿಶೀಲಿಸುವುದು ಉತ್ತಮ: ಮಾಯಾವತಿ

Update: 2020-11-29 07:43 GMT

ಹೊಸದಿಲ್ಲಿ: ದೇಶದ ರೈತರ ಆಕ್ರೋಶಕ್ಕೆ ಕಾರಣವಾಗಿರುವ ನೂತನ ಕೃಷಿ ಕಾನೂನುಗಳ ಮರು ಪರಿಶೀಲಿಸುವತ್ತ ಕೇಂದ್ರ ಸರಕಾರ ಚಿತ್ತಹರಿಸುವ ಅಗತ್ಯವಿದೆ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ವರಿಷ್ಠೆ ಮಾಯಾವತಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

"ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಕಾನೂನುಗಳ ವಿರುದ್ಧ ದೇಶಾದ್ಯಂತದ ರೈತರು ಆಕ್ರೋಶಿತರಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಒಪ್ಪಿಗೆಗೆ ಇಲ್ಲದೆ ಜಾರಿಗೆ ತಂದಿರುವ ಈ ಕೃಷಿ ಕಾನೂನುಗಳ ಕುರಿತು ಪುನರ್ವಿರ್ಮಶೆ ಮಾಡಿದರೆ ಉತ್ತಮ'' ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

"ಒಂದು ವೇಳೆ ಮೋದಿಜಿ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೊದಲು ಈ ಕುರಿತು ರೈತರೊಂದಿಗೆ ಚರ್ಚಿಸಿದ್ದರೆ ಇಂತಹ ಪರಿಸ್ಥಿತಿ ಏಕೆ ಉದ್ಭವಿಸುತ್ತಿತ್ತು?ಮೋದಿಜಿ ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ರೈತರೊಂದಿಗೆ ಚರ್ಚಿಸಿದ ಬಳಿಕ ಅದನ್ನು ಸಂಸದೀಯ ಸಮಿತಿಗೆ ಕಳುಹಿಸಿ ಮರು ಪರಿಶೀಲಿಸಬೇಕು'' ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News