ಕೊರೋನ ಸೋಂಕಿತ ಮಹಿಳೆಗೆ ಜನಿಸಿದ ಶಿಶುವಿನಲ್ಲಿ ಪ್ರತಿಕಾಯ ಪತ್ತೆ!

Update: 2020-11-29 16:59 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ, ನ.29: ಕಳೆದ ಮಾರ್ಚ್‌ನಲ್ಲಿ ಗರ್ಭಿಣಿಯಾಗಿದ್ದಾಗ ಕೊರೋನ ವೈರಸ್ ಸೋಂಕಿಗೊಳಗಾಗಿದ್ದ ಸಿಂಗಾಪುರದ ಮಹಿಳೆಯೊಬ್ಬರು, ಈ ಮಾರಣಾಂತಿಕ ವೈರಸ್ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವ ಶಿಶುವೊಂದಕ್ಕೆ ಜನ್ಮ ನೀಡಿರುವುದು ವೈದ್ಯಲೋಕದಲ್ಲಿ ಕುತೂಹಲ ಸೃಷ್ಟಿಸಿದೆ.

ಈ ಗಂಡು ಶಿಶುವು ಈ ತಿಂಗಳಲ್ಲಿ ಕೋವಿಡ್-19 ಸೋಂಕು ಇಲ್ಲದೆ ಜನಿಸಿದೆ. ಆದರೆ ಆ ಮಗುವಿನಲ್ಲಿ ಕೊರೋನ ವೈರಸ್ ವಿರುದ್ಧದ ಪ್ರತಿಕಾಯಗಳು ಕಂಡುಬಂದಿವೆಯೆಂದು ಸ್ಟ್ರೇಯಿಟ್ಸ್ ಟೈಮ್ಸ್ ದಿನಪತ್ರಿಕೆ ರವಿವಾರ ವರದಿ ಮಾಡಿದೆ.

‘‘ನನ್ನ ಕೋವಿಡ್-19 ಪ್ರತಿಕಾಯಗಳು ಗರ್ಭಧಾರಣೆಯ ಸಂದರ್ಭದಲ್ಲಿ ಮಗುವಿಗೆ ವರ್ಗಾವಣೆಗೊಂಡಿರಬೇಕೆಂದು ವೈದ್ಯರು ಊಹಿಸಿದ್ದಾರೆ’’ ಎಂದು ತಾಯಿ ಸೆಲೈನ್ ಎನ್‌ಜಿ-ಚಾನ್ ಪತ್ರಿಕೆಗೆ ತಿಳಿಸಿದ್ದಾರೆ.

ಮಹಿಳೆ ಮಗುವನ್ನು ಪ್ರಸವಿಸಿದ ಸಿಂಗಾಪುರದ ನ್ಯಾಶನಲ್ ಯೂನಿವರ್ಸಿಟಿ ಹಾಸ್ಪಿಟಲ್ (ಎನ್‌ಯುಎಚ್), ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದೆ.

 ಕೋವಿಡ್-19 ಸೋಂಕಿತ ಮಹಿಳೆಯು ಭ್ರೂಣಾವಸ್ಥೆಯಲ್ಲಿ ಅಥವಾ ಪ್ರಸವದ ಸಂದರ್ಭ ವೈರಸನ್ನು ತನ್ನ ಶಿಶುವಿಗೆ ವರ್ಗಾಯಿಸುವ ಸಾಧ್ಯತೆಯ ಬಗ್ಗೆ ತನಗೆ ಈ ವರೆಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಹೇಳಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News