ಆಸ್ಟ್ರೇಲಿಯದಲ್ಲಿ ನವೆಂಬರ್‌ನ ಗರಿಷ್ಠ ತಾಪಮಾನ ದಾಖಲು

Update: 2020-11-29 17:01 GMT

 ಸಿಡ್ನಿ,ನ.29: ಸಿಡ್ನಿ ಸೇರಿದಂತೆ ಆಸ್ಟ್ರೇಲಿಯದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿ ತಾಪಮಾನದಲ್ಲಿ ಭಾರೀ ಏರಿಕೆಯಾಗಿದೆ. ಇದು ಈತನಕ ದಾಖಲಿಸಲ್ಪಟ್ಟಿರುವ ನವೆಂಬರ್ ತಿಂಗಳ ರಾತ್ರಿಯ ಅತ್ಯಧಿಕ ಉಷ್ಣಾಂಶದ ದಿನವೆಂದು ಮೂಲಗಳು ತಿಳಿಸಿವೆ.

 ಸಿಡ್ನಿಯಲ್ಲಿ ಶನಿವಾರ ರಾತ್ರಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್)ಅನ್ನು ದಾಟಿದೆ. ಪಶ್ಚಿಮ ನ್ಯೂ ಸೌತ್ ವೇಲ್ಸ್, ದಕ್ಷಿಣ ಆಸ್ಟ್ರೇಲಿಯ ಹಾಗೂ ಉತ್ತರ ವಿಕ್ಟೋರಿಯಾಗಳಲ್ಲಿ ತಾಪಮಾನವು 45 ಡಿಗ್ರಿಗಳ ಸನಿಹಕ್ಕೆ ತಲುಪಿರುವುದಾಗಿ ತಿಳಿದುಬಂದಿದೆ.

ಸತತವಾಗಿ ಎರಡನೇ ದಿನವೂ ಅಂದರೆ ರವಿವಾರ ಕೂಡಾ ಆಸ್ಟ್ರೇಲಿಯದ ವಿವಿಧೆಡೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟುವ ನಿರೀಕ್ಷೆಯಿದೆಯೆಂದು ಆಸ್ಟ್ರೇಲಿಯದ ಹವಾಮಾನ ಇಲಾಖೆ ಅಂದಾಜಿಸಿದೆ. ನ್ಯೂಸೌತ್ ವೇಲ್ಸ್ ಹಾಗೂ ಆಗ್ನೇಯ ಕ್ವೀನ್ಸ್‌ಲ್ಯಾಂಡ್‌ನ ವಿವಿಧೆಡೆ ಭಾಗಗಳಲ್ಲಿ ಮುಂದಿನ ಐದಾರು ದಿನಗಳ ಕಾಲ ಉಷ್ಣಮಾರುತ ಬೀಸಲಿದೆಯೆಂದು ಅದು ಮುನ್ಸೂಚನೆ ನೀಡಿದೆ.

ತಾಪಮಾನದಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಸ್ಟೇಲಿಯದ ಅಧಿಕಾರಿಗಳು ಬೆಂಕಿ ಉರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News