ಟಿಬೆಟ್ ನ ಬ್ರಹ್ಮಪುತ್ರ ನದಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಚಿಂತನೆ

Update: 2020-11-30 08:31 GMT

ಬೀಜಿಂಗ್ : ಟಿಬೆಟ್‍ನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿ  ಬೃಹತ್ ಜಲವಿದ್ಯುತ್ ಸ್ಥಾವರ ನಿರ್ಮಿಸುವ ಉದ್ದೇಶವನ್ನು ಚೀನಾ ಹೊಂದಿದೆ. ಈ ಕುರಿತಾದ ಪ್ರಸ್ತಾವನೆಯನ್ನು ದೇಶದ 14ನೇ ಪಂಚವಾರ್ಷಿಕ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಹಾಗೂ ಮುಂದಿನ ವರ್ಷ ಈ ಯೋಜನೆ  ಜಾರಿಗೊಳಿಸಲಾಗುವುದು ಎಂದು  ಈ ಯೋಜನೆಗೆ ಅಣೆಕಟ್ಟು ನಿರ್ಮಿಸುವ ಕೆಲಸ ವಹಿಸಲಾಗಿರುವ ಪವರ್ ಕನ್‍ಸ್ಟ್ರಕ್ಷನ್ ಕಾರ್ಪ್ ಆಫ್ ಚೈನಾ  ಸಂಸ್ಥೆಯ ಅಧ್ಯಕ್ಷ ಯನ್ ಝಿಯೊಮಗ್ ಹೇಳಿದ್ದಾರೆಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಟಿಬೆಟ್‍ನಲ್ಲಿ ಬ್ರಹ್ಮಪುತ್ರ ನದಿಯನ್ನು ಯಾರ್ಲುಂಗ್ ಝಂಗ್ಬೊ  ನದಿ ಎಂದು ಕರೆಯಲಾಗುತ್ತದೆ. ಈ ಯೋಜನೆಯು ಚೀನಾದ ಜಲವಿದ್ಯುತ್ ಕ್ಷೇತ್ರದ ಐತಿಹಾಸಿಕ ಯೋಜನೆಯಾಗಲಿದೆ ಎಂದು ಚೀನಾ ಸೊಸೈಟಿ ಫಾರ್ ಹೈಡ್ರೋಪವರ್ ಇಂಜಿನಿಯರಿಂಗ್ ಇದರ  40ನೇ ಸ್ಥಾಪನಾ ದಿನಾಚರಣೆ ಸಂದರ್ಭ ಆಯೋಜಿಸಲಾದ  ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಯನ್ ಹೇಳಿದ್ದಾರೆ.

ಬ್ರಹ್ಮಪುತ್ರ ನದಿಯಲ್ಲಿ  ಅಣೆಕಟ್ಟು ನಿರ್ಮಾಣ ಪ್ರಸ್ತಾಪ ಮುಂದಿಟ್ಟಾಗಲೆಲ್ಲಾ ಅದು ಭಾರತ ಮತ್ತು ಬಾಂಗ್ಲಾದೇಶಕ್ಕೆ ಕಳವಳವುಂಟು ಮಾಡುತ್ತಿದೆ. ಬ್ರಹ್ಮಪುತ್ರ ನದಿ ಹರಿವಿನ ಕೆಳ ಭಾಗದ ಪ್ರದೇಶಗಳು  ಭಾರತದಲ್ಲಿರುವುದರಿಂದ  ಟಿಬೆಟಿನಲ್ಲಿ ನಿರ್ಮಾಣವಾಗುವ ಅಣೆಕಟ್ಟು  ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆಯೆಂದೇ ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News