ಲಸಿಕೆ ಗಂಭೀರ ಪ್ರಕರಣಗಳಲ್ಲಿ 100 ಶೇ. ಪರಿಣಾಮಕಾರಿ: ಮೋಡರ್ನಾ

Update: 2020-11-30 17:12 GMT

ವಾಶಿಂಗ್ಟನ್, ನ. 30: ಕೋವಿಡ್-19 ಲಸಿಕೆಯನ್ನು ತಯಾರಿಸಲು ತುರ್ತು ಅನುಮೋದನೆ ನೀಡುವಂತೆ ಅವೆುರಿಕ ಮತ್ತು ಐರೋಪ್ಯ ಒಕ್ಕೂಟಕ್ಕೆ ಮನವಿ ಸಲ್ಲಿಸುವುದಾಗಿ ಅಮೆರಿಕದ ಔಷಧ ತಯಾರಿಕಾ ಕಂಪೆನಿ ಮೋಡರ್ನಾ ಇಂಕ್ ಸೋಮವಾರ ತಿಳಿಸಿದೆ.

ಕೊನೆಯ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ, ಲಸಿಕೆಯು 94.1 ಶೇಕಡ ಪರಿಣಾಮಕಾರಿ ಹಾಗೂ ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲ ಎನ್ನುವುದು ಸಾಬೀತಾದ ಬಳಿಕ ಕಂಪೆನಿಯು ಉತ್ಪಾದನಾ ಹಂತಕ್ಕೆ ಕಾಲಿಟ್ಟಿದೆ.

ಲಸಿಕೆಯ ಪರಿಣಾಮವು ಎಲ್ಲ ವಯೋ ಗುಂಪುಗಳು, ಜನಾಂಗಗಳು, ಬುಡಕಟ್ಟುಗಳು ಮತ್ತು ಲಿಂಗಗಳ ಜನರಲ್ಲಿ ಸ್ಥಿರವಾಗಿದೆ ಎಂದು ಕಂಪೆನಿ ಹೇಳಿದೆ. ಅದೇ ವೇಳೆ, ಕೊರೋನ ವೈರಸ್‌ನ ಗಂಭೀರ ಪ್ರಕರಣಗಳನ್ನು ತಡೆಯುವಲ್ಲಿ ಲಸಿಕೆಯು 100 ಶೇಕಡ ಯಶಸ್ವಿಯಾಗಿದೆ ಎಂಬುದಾಗಿಯೂ ಮೋಡರ್ನಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News