ಮೂಗಿನ ಮೂಲಕ ಮೆದುಳು ಪ್ರವೇಶಿಸುವ ಕೊರೋನ ವೈರಸ್: ನೂತನ ಅಧ್ಯಯನ

Update: 2020-11-30 17:13 GMT

ಬರ್ಲಿನ್ (ಜರ್ಮನಿ), ನ. 30: ನೋವೆಲ್ ಕೊರೋನ ವೈರಸ್ ಮೂಗಿನ ಮೂಲಕ ಮೆದುಳನ್ನು ಪ್ರವೇಶಿಸಬಹುದಾಗಿದೆ ಎಂದು ಸೋಮವಾರ ಪ್ರಕಟವಾಗಿರುವ ಅಧ್ಯಯನವೊಂದು ತಿಳಿಸಿದೆ. ಈ ಅಧ್ಯಯನದ ಆಧಾರದಲ್ಲಿ, ಕೊರೋನ ವೈರಸ್ ರೋಗಿಗಳಲ್ಲಿ ಕಂಡುಬರುವ ಕೆಲವು ನರ ದೌರ್ಬಲ್ಯ ಲಕ್ಷಣಗಳಿಗೆ ಈಗ ವಿವರಣೆ ನೀಡಬಹುದಾಗಿದೆ.

ಕೊರೋನ ವೈರಸ್ ಶ್ವಾಸಕೋಶಕ್ಕೆ ಮಾತ್ರ ಹಾನಿ ಮಾಡುವುದಲ್ಲ, ಕೇಂದ್ರೀಯ ನರಮಂಡಲದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದನ್ನು ‘ನೇಚರ್ ನ್ಯೂರೋಸಯನ್ಸ್’ನಲ್ಲಿ ಪ್ರಕಟಗೊಂಡ ಅಧ್ಯಯನವು ಸಾಬೀತುಪಡಿಸಿದೆ.

ಕೊರೋನ ವೈರಸ್ ರೋಗಿಗಳಲ್ಲಿ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ನಷ್ಟ, ತಲೆನೋವು, ಬಳಲಿಕೆ ಮತ್ತು ವಾಕರಿಕೆ ಮುಂತಾದ ನರ ಸಂಬಂಧಿ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News