ಎಲ್ಲ 500 ರೈತ ಸಂಘಟನೆಗಳಿಗೆ ಆಹ್ವಾನ ನೀಡುವ ತನಕ ಕೇಂದ್ರದೊಂದಿಗೆ ಮಾತುಕತೆ ಇಲ್ಲ: ಕಿಸಾನ್ ಸಂಘರ್ಷ ಸಮಿತಿ

Update: 2020-12-01 06:06 GMT

ಹೊಸದಿಲ್ಲಿ: "ದೇಶದಲ್ಲಿ 500ಕ್ಕೂ ಅಧಿಕ ರೈತ ಸಂಘಟನೆಗಳಿವೆ. ಆದರೆ ಸರಕಾರವು ಕೇವಲ 32 ಸಂಘಟನೆಗಳಿಗೆ ಮಾತ್ರ ಮಾತುಕತೆಗೆ ಆಹ್ವಾನಿಸಿದೆ. ಉಳಿದವರನ್ನು ಸರಕಾರವು ಕರೆದಿಲ್ಲ. ಎಲ್ಲ ರೈತ ಸಂಘಟನೆಗಳಿಗೆ ಆಹ್ವಾನ ನೀಡುವ ತನಕ ನಾವು ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲು ಮುಂದಾಗುವುದಿಲ್ಲ'' ಎಂದು ಪಂಜಾಬ್ ಕಿಸಾನ್ ಸಂಘರ್ಘ ಸಮಿತಿ ಜಂಟಿ ಕಾರ್ಯದರ್ಶಿ ಸುಖ್ಚಿಂದರ್ ಸಭ್ರಾನ್ ಹೇಳಿದ್ದಾರೆ.

ಕೇಂದ್ರ ಸರಕಾರ ನೂತನ ಕೃಷಿ ಕಾನೂನು ಜಾರಿಗೆ ತಂದ ತಕ್ಷಣ ರೈತರು ಪ್ರತಿಭಟನೆ  ಆರಂಭಿಸಿದ್ದರು.. ಇದೀಗ ದಿಲ್ಲಿ-ಹರ್ಯಾಣ ಗಡಿಯಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸಿಂಘ್ರು ಬಾರ್ಡರ್ ನಲ್ಲಿ ಬೀಡುಬಿಟ್ಟಿರುವ ರೈತರು ಕೇಂದ್ರ ಸರಕಾರದ ಷರತ್ತುಬದ್ದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿ ಧರಣಿಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News