×
Ad

ರೈತರ ಹೋರಾಟಕ್ಕೆ ಬೆಂಬಲ: ಪ್ರಶಸ್ತಿ ವಾಪಸ್ ಗೆ ಕ್ರೀಡಾ ಸಾಧಕರ ನಿರ್ಧಾರ

Update: 2020-12-01 22:29 IST

ಹೊಸದಿಲ್ಲಿ, ಡಿ.1: ಕ್ರೀಡಾಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಪದ್ಮಶ್ರೀ, ಅರ್ಜುನ ಪುರಸ್ಕಾರದ ಸಹಿತ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕ್ರೀಡಾಳುಗಳು ರೈತರ ಹೋರಾಟಕ್ಕೆ ಬೆಂಬಲವಾಗಿ ತಮ್ಮ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸುವುದಾಗಿ ಘೋಷಿಸಿದ್ದಾರೆ.

ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್‌ಬಾಲ್ ಆಟಗಾರ ಸಜ್ಜನ್ ಸಿಂಗ್ ಚೀಮಾ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಕಿ ಆಟಗಾರ್ತಿ ರಾಜ್‌ಬೀರ್ ಕೌರ್, ತಾವು ಡಿಸೆಂಬರ್ 5ರಂದು ರಾಷ್ಟ್ರಪತಿ ಭವನದ ಎದುರು ತಮ್ಮ ಪದಕಗಳನ್ನು ಇರಿಸಿದ ಬಳಿಕ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದಿದ್ದಾರೆ. ರೈತರ ದಿಲ್ಲಿ ಚಲೋ ಜಾಥಾವನ್ನು ಬಲಪ್ರಯೋಗ ನಡೆಸಿ ಹತ್ತಿಕ್ಕಲು ಕೇಂದ್ರ ಸರಕಾರ ಮುಂದಾಗಿರುವುದನ್ನು ಪ್ರತಿಭಟಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.

ಇನ್ನೂ ಕೆಲವು ಮಾಜಿ ಕ್ರೀಡಾಪಟುಗಳನ್ನು ಸಂಪರ್ಕಿಸಿದ್ದು, ಸುಮಾರು 150 ಕ್ರೀಡಾಪಟುಗಳು ರೈತರ ಪ್ರತಿಭಟನೆಗೆ ಕೈಜೋಡಿಸಲಿದ್ದಾರೆ ಎಂದು ಕರ್ತಾರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News