ಇಂಡೋನೇಶ್ಯ: ಸ್ಫೋಟಿಸಿದ ಜ್ವಾಲಾಮುಖಿ: ನೂರಾರು ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಪಲಾಯನ

Update: 2020-12-02 17:33 GMT

ಲುಮಾಜಂಗ್ (ಇಂಡೋನೇಶ್ಯ), ಡಿ. 2: ಇಂಡೋನೇಶ್ಯದ ಜಾವಾ ದ್ವೀಪದಲ್ಲಿರುವ ವೌಂಟ್ ಸೆಮೆರು ಜ್ವಾಲಾಮುಖಿ ಪರ್ವತವು ಸಾವಿರಾರು ಮೀಟರ್ ಎತ್ತರಕ್ಕೆ ಬಿಸಿ ಬೂದಿಯನ್ನು ಉಗುಳುತ್ತಿದೆ ಹಾಗೂ ಲಾವಾರಸವನ್ನು ಹೊರಸೂಸುತ್ತಿದೆ. ಭಯಭೀತರಾಗಿರುವ ಸುತ್ತಲಿನ ಗ್ರಾಮಗಳ ನೂರಾರು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಪಲಾಯನಗೈಯುತ್ತಿದ್ದಾರೆ.

 ಜ್ವಾಲಾಮುಖಿ ಪರ್ವತವು ಮಂಗಳವಾರ ಬೃಹತ್ ಪ್ರಮಾಣದ ಬಿಸಿ ಬೂದಿಯನ್ನು ಆಕಾಶಕ್ಕೆ ಉಗುಳಿದೆ. ನೂರಾರು ಸಾಕುಪ್ರಾಣಿಗಳು ಸತ್ತು ಬಿದ್ದಿರುವುದನ್ನು ಚಿತ್ರಗಳು ತೋರಿಸಿವೆ.

ಈ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈಗಲೂ ಪರ್ವತದಿಂದ ಲಾವಾರಸ ಹೊರಸೂಸುತ್ತಿದೆ ಹಾಗೂ ಇನ್ನಷ್ಟು ಹೆಚ್ಚಿನ ಪ್ರಮಾಣದ ಲಾವಾರಸ ಹರಿಯುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ, ನಿವಾಸಿಗಳಿಗೆ ಈ ಪ್ರದೇಶವು ಈಗಲೂ ಅಪಾಯಕಾರಿಯಾಗಿಯೇ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ಇಂಡೋನೇಶ್ಯದಲ್ಲಿ ಸುಮಾರು 130 ಸಕ್ರಿಯ ಜ್ವಾಲಾಮುಖಿ ಪರ್ವತಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News