ರೈತರ ಪ್ರತಿಭಟನೆ ಬೆಂಬಲಿಸಿ ಡಿ.8ರಿಂದ ಸರಕುಸಾಗಾಟ ನಿರ್ವಹಣೆ ಬಂದ್ ಬೆದರಿಕೆ

Update: 2020-12-02 18:20 GMT

ಹೊಸದಿಲ್ಲಿ: ಕೇಂದ್ರ ಸರಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ಸುತ್ತಮುತ್ತ ರೈತರು ನಡೆಸುತ್ತಿರುವ ಪ್ರತಿಭಟನೆಗೆ  ಸರಕು ಸಾಗಣೆದಾರರ ಪ್ರಮುಖ ಒಕ್ಕೂಟ ಅಖಿಲ ಭಾರತ ವಾಹನ ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ)ಬೆಂಬಲಿಸಲು ಮುಂದಾಗಿದೆ. ಕೇಂದ್ರ ಸರಕಾರವು ಒಂದು ವೇಳೆ ರೈತ ಸಮುದಾಯದ ಕಳವಳವನ್ನು ದೂರ ಮಾಡಲು ವಿಫಲರಾದರೆ ಡಿಸೆಂಬರ್ 8ರಿಂದ ಉತ್ತರ ಭಾರತದಲ್ಲಿ ಸರಕು ಸಾಗಾಟ ನಿರ್ವಹಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬುಧವಾರ ಬೆದರಿಕೆ ಹಾಕಿದೆ.

ಎಐಎಂಟಿಸಿ ಸುಮಾರು 95 ಲಕ್ಷ ಟ್ರಕ್ ಗಳು ಹಾಗೂ ಇತರ ಘಟಕಗಳನ್ನು ಪ್ರತಿನಿಧಿಸುತ್ತದೆ.

ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯು ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ. ಸರಕಾರವು ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ನಾವು ಹೆಚ್ಚು ಕಠಿಣ ಹೆಜ್ಜೆ ಇಡುತ್ತೇವೆ ಎಂದು ರೈತರ ನಾಯಕ ಗುರ್ನಾಮ್ ಸಿಂಗ್ ಚದೋನಿ ದಿಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News