ಮರಡೋನಗೆ ಗೌರವ ಸಲ್ಲಿಸಲು ಜರ್ಸಿ ಕಳಚಿದ್ದ ಮೆಸ್ಸಿಗೆ ದಂಡ!

Update: 2020-12-03 05:51 GMT

ನೌ ಕ್ಯಾಂಪ್: ಇತ್ತೀಚೆಗೆ ನಿಧನರಾಗಿರುವ ಫುಟ್ಬಾಲ್ ದಂತಕತೆ ಡಿಯಾಗೊ ಮರಡೋನಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮೈದಾನದೊಳಗೆ ತನ್ನ ಜರ್ಸಿಯನ್ನು ಕಳಚಿದ್ದ ಲಿಯೊನೆಲ್ ಮೆಸ್ಸಿಗೆ 600 ಯುರೋಸ್(720 ಡಾಲರ್)ದಂಡ ವಿಧಿಸಲಾಗಿದೆ ಎಂದು ಸ್ಪ್ಯಾನಿಶ್ ಫುಟ್ಬಾಲ್ ಫೆಡರೇಶನ್ ಬುಧವಾರ ತಿಳಿಸಿದೆ.

ರವಿವಾರ ಸ್ಪ್ಯಾನಿಶ್ ಲೀಗ್ ಪಂದ್ಯದ ವೇಳೆ ಒಸಾಸುನಾ ತಂಡದ ವಿರುದ್ಧ ಬಾರ್ಸಿಲೋನ 4-0 ಅಂತರದಿಂದ ಗೆದ್ದ ಪಂದ್ಯದ ವೇಳೆ ಗೋಲು ಗಳಿಸಿದ ಬಳಿಕ ತನ್ನ ಜರ್ಸಿಯನ್ನು ತೆಗೆದಿದ್ದ ಅರ್ಜೆಂಟೀನ ಆಟಗಾರ ಮೆಸ್ಸಿಗೆ ಫೆಡರೇಶನ್ ಕಾಂಪಿಟೀಶನ್ಸ್ ಕಮಿಟಿ ದಂಡ ವಿಧಿಸಿದೆ.

ಗೋಲು ಗಳಿಸಿದ ಬಳಿಕ ಮೆಸ್ಸಿ ಬಾರ್ಸಿಲೋನದ ಜರ್ಸಿಯ ಜೊತೆಗೆ ಧರಿಸಿದ್ದ ಮರಡೋನ ಧರಿಸುತ್ತಿದ್ದ ಕೆಂಪು ಹಾಗೂ ಕಪ್ಪು ಬಣ್ಣದ ಜರ್ಸಿಯನ್ನು ಪ್ರದರ್ಶಿಸಿದರು. ತನ್ನ ಎರಡೂ ಕೈಗಳಿಗೆ ಮುತ್ತಿಕ್ಕಿದ ಅವರ ಆಕಾಶದತ್ತ ನೋಡಿದರು.

ಪಂದ್ಯದ ಬಳಿಕ ತಾನು ಗೌರವ ಸಲ್ಲಿಸಿದ ಫೋಟೊದ ಜೊತೆಗೆ ಮರಡೋನ ಧರಿಸಿದ್ದ ಕೆಂಪು ಹಾಗೂ ಕಪ್ಪುಬಣ್ಣದ ಜರ್ಸಿಯ ಹಳೆಯ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಡಿಯಾಗೊಗೆ ವಿದಾಯ ಎಂದು ಸ್ಪ್ಯಾನಿಶ್ ಭಾಷೆಯಲ್ಲಿ ಬರೆದಿದ್ದರು.

ಮರಡೋನ ಕಳೆದ ವಾರ ತನ್ನ 60ನೇ ವಯಸ್ಸಿನಲ್ಲಿ ನಿಧನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News