ಕೊರೋನದಿಂದ ಇನ್ನೂ 7.2 ಕೋಟಿ ಮಕ್ಕಳು ಕಲಿಕೆಯಲ್ಲಿ ಹಿಂದೆ: ವಿಶ್ವಬ್ಯಾಂಕ್ ವರದಿ

Update: 2020-12-03 16:00 GMT

ವಾಶಿಂಗ್ಟನ್, ಡಿ. 3: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಶಾಲೆಗಳು ಮುಚ್ಚಿದ ಪರಿಣಾಮವಾಗಿ ಪ್ರಾಥಮಿಕ ಶಾಲಾ ಪ್ರಾಯದ ಹೆಚ್ಚುವರಿ 7.2 ಕೋಟಿ ಮಕ್ಕಳು ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಈ ಮಕ್ಕಳಿಗೆ 10 ವರ್ಷ ತುಂಬಿದರೂ ಅವರಿಗೆ ಸರಳ ಬರಹವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅದು ಹೇಳಿದೆ.

ಈಗಾಗಲೇ ಅಸ್ತಿತ್ವದಲ್ಲಿದ್ದ ಜಾಗತಿಕ ಕಲಿಕಾ ಬಿಕ್ಕಟ್ಟನ್ನು ಕೊರೋನ ವೈರಸ್ ಹಿಗ್ಗಿಸಿದೆ ಎಂದು ಅದು ತಿಳಿಸಿದೆ.

   ಸಾಂಕ್ರಾಮಿಕದಿಂದಾಗಿ, 10 ವರ್ಷ ತುಂಬಿದರೂ ಸರಳ ಬರಹವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಮಕ್ಕಳ ಸಂಖ್ಯೆ 53 ಶೇಕಡದಿಂದ 63 ಶೇಕಡಕ್ಕೆ ಏರಿದೆ. ಇದರಿಂದಾಗಿ, ಈ ತಲೆಮಾರಿನ ಮಕ್ಕಳ ಭವಿಷ್ಯದ ಜೀವಮಾನದ ಸಂಪಾದನೆಯು 10 ಲಕ್ಷ ಕೋಟಿ ಡಾಲರ್‌ನಷ್ಟು ಕುಸಿಯಲಿದೆ. ಇದು ಜಾಗತಿಕ ಒಟ್ಟು ದೇಶಿ ಉತ್ಪನ್ನ (ಜಿಡಿಪಿ)ದ ಸುಮಾರು 10 ಶೇಕಡದಷ್ಟಾಗಿರುತ್ತದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News