×
Ad

ಚೀನಾ ಕಮ್ಯುನಿಸ್ಟ್ ಪಕ್ಷದ ಸದಸ್ಯರಿಗೆ ಅಮೆರಿಕ ಪ್ರವೇಶಿಸಲು ಹೊಸ ನಿರ್ಬಂಧ

Update: 2020-12-03 22:14 IST

ವಾಶಿಂಗ್ಟನ್, ಡಿ. 3: ಅವೆುರಿಕ ಪ್ರವೇಶಿಸುವ ಚೀನಾ ಕಮ್ಯುನಿಸ್ಟ್ ಪಕ್ಷದ ಸದಸ್ಯರಿಗೆ ಹೊಸ ಪ್ರವೇಶ ನಿಯಮಗಳನ್ನು ವಿಧಿಸಲಾಗಿದೆ ಎಂದು ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ ಗುರುವಾರ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಹೊಸ ನಿಯಮಗಳ ಅನ್ವಯ, ಕಮ್ಯುನಿಸ್ಟ್ ಪಕ್ಷದ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡಲಾಗುವ ವೀಸಾಗಳ ಅವಧಿಯನ್ನು ಒಂದು ತಿಂಗಳಿಗೆ ಮಿತಿಗೊಳಿಸಲಾಗಿದೆ ಹಾಗೂ ಅವರು ಅಮೆರಿಕಕ್ಕೆ ಒಮ್ಮೆ ಮಾತ್ರ ಭೇಟಿ ನೀಡಬಹುದಾಗಿದೆ ಎಂದು ವರದಿ ಹೇಳಿದೆ.

‘‘ಚೀನಾ ಕಮ್ಯುನಿಸ್ಟ್ ಪಕ್ಷದ ಸದಸ್ಯರಿಗೆ ನಾವು ದಶಕಗಳಿಂದ ನಮ್ಮ ಸಂಸ್ಥೆಗಳು ಮತ್ತು ಉದ್ಯಮಗಳಿಗೆ ಮುಕ್ತ ಹಾಗೂ ಅನಿರ್ಬಂಧಿತ ಪ್ರವೇಶ ನೀಡಿದ್ದೇವೆ. ಆದರೆ ಈ ಸವಲತ್ತುಗಳನ್ನು ಚೀನಾದಲ್ಲಿರುವ ಅಮೆರಿಕ ನಾಗರಿಕರಿಗೆ ಯಾವತ್ತೂ ನೀಡಲಾಗಿಲ್ಲ’’ ಎಂದು ವಿದೇಶ ಸಚಿವಾಲಯದ ವಕ್ತಾರರೊಬ್ಬರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News