ಚಂದ್ರನಿಂದ ಮಣ್ಣು ಸಂಗ್ರಹಿಸುವ ಕಾರ್ಯ ಪೂರ್ಣಗೊಳಿಸಿದ ಚೀನಾದ ಶೋಧಕ ನೌಕೆ

Update: 2020-12-03 17:05 GMT

ಬೀಜಿಂಗ್ (ಚೀನಾ), ಡಿ. 3: ಚಂದ್ರನ ಈ ಹಿಂದೆ ಕಂಡಿರದ ಭಾಗದಿಂದ ಮಣ್ಣಿನ ಮಾದರಿಗಳನ್ನು ತರಲು ಕಳುಹಿಸಲಾಗಿದ್ದ ಚೀನಾದ ಚಂದ್ರ ಶೋಧಕ ನೌಕೆ ‘ಚಾಂಗೆ-5’ ತನ್ನ ಯೋಜನೆಯನ್ನು ಪೂರ್ಣಗೊಳಿಸಿದೆ. ಈಗ ಅದು ನಾಲ್ಕು ದಶಕಗಳಲ್ಲೇ ಜಗತ್ತು ಕಾಣಲಿರುವ ಮೊದಲ ಚಂದ್ರ ಮಾದರಿಯನ್ನು ಭೂಮಿಗೆ ಕಳುಹಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಗುರುವಾರ ತಿಳಿಸಿದೆ.

ಚೀನಾವು ತನ್ನ ಸೇನಾ ಉಸ್ತುವಾರಿಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಾವಿರಾರು ಕೋಟಿಗಟ್ಟಳೆ ರೂಪಾಯಿಗಳನ್ನು ಸುರಿಯುತ್ತಿದೆ. ಅದು 2022ರ ವೇಳೆಗೆ ಮಾನವಸಹಿತ ಬಾಹ್ಯಾಕಾಶ ನಿಲ್ದಾಣವೊಂದನ್ನು ಹೊಂದುವ ಹಾಗೂ ಆ ಬಳಿಕ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸುವ ಗುರಿಯನ್ನು ಹೊಂದಿದೆ.

ಚೀನಾದ ಚಂದ್ರ ದೇವತೆಯ ಹೆಸರನ್ನು ಹೊಂದಿರುವ ‘ಚಾಂಗೆ-5’ ಶೋಧಕ ನೌಕೆಯು ಮಂಗಳವಾರ ಚಂದ್ರನಲ್ಲಿ ಇಳಿದಿದೆ. ಈಗ ಅದು ಚಂದ್ರನ ಮೇಲ್ಮೈಯಿಂದ ಕಲ್ಲು ಮತ್ತು ಮಣ್ಣನ್ನು ಸಂಗ್ರಹಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದು ಚೀನಾ ನ್ಯಾಶನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News