170 ಆನೆಗಳ ಹರಾಜಿಗೆ ಮುಂದಾದ ನಮೀಬಿಯ

Update: 2020-12-03 17:26 GMT

ವಿಂಡ್‌ಹೋಕ್ (ನಮೀಬಿಯ), ಡಿ. 3: ಬರಗಾಲ ಮತ್ತು ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ನಮೀಬಿಯ ದೇಶವು 170 ‘ಉನ್ನತ ಮೌಲದ್ಯ’ ಕಾಡಾನೆಗಳನ್ನು ಮಾರಾಟಕ್ಕೆ ಇಟ್ಟಿದೆ. ಈ ವಿಷಯವನ್ನು ಆಫ್ರಿಕ ಖಂಡದ ದಕ್ಷಿಣ ಭಾಗದ ದೇಶವಾಗಿರುವ ನಮೀಬಿಯದ ಪರಿಸರ ಸಚಿವಾಲಯ ಬುಧವಾರ ತಿಳಿಸಿದೆ.

‘‘ಬೇಟೆ ಮತ್ತು ಪರಿಸರ ಕಾರಣಗಳಿಂದಾಗಿ ಆನೆಗಳು ಅಳಿವಿನಂಚಿನಲ್ಲಿವೆ. ಮಾನವರು ಮತ್ತು ಆನೆಗಳ ನಡುವಿನ ಹೆಚ್ಚುತ್ತಿರುವ ಸಂಘರ್ಷವನ್ನು ತಡೆಯುವುದಕ್ಕಾಗಿ ಆನೆಗಳ ಮಾರಾಟಕ್ಕೆ ಸರಕಾರ ಮುಂದಾಗಿದೆ’’ ಎಂದು ಸರಕಾರದ ಒಡೆತನದ ದೈನಿಕ ‘ನ್ಯೂ ಇರ’ದಲ್ಲಿ ಪ್ರಕಟವಾದ ಜಾಹೀರಾತೊಂದು ತಿಳಿಸಿದೆ.

ಆನೆಗಳ ಹರಾಜಿನಲ್ಲಿ ನಮೀಬಿಯದ ಜನರು ಹಾಗೂ ವಿದೇಶೀಯರು ಭಾಗವಹಿಸಬಹುದು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News