ವರವರ ರಾವ್ ಡಿ. 14ರ ವರೆಗೆ ಆಸ್ಪತ್ರೆಯಲ್ಲೇ ಇರಲಿ: ಬಾಂಬೆ ಹೈಕೋರ್ಟ್

Update: 2020-12-03 17:55 GMT

ಮುಂಬೈ, ಡಿ. 3: ಎಲ್ಗರ್ ಪರಿಷದ್-ಮಾವೋವಾದಿ ನಂಟು ಪ್ರಕರಣದಲ್ಲಿ ಬಂಧಿತರಾಗಿರುವ ಕವಿ ಹಾಗೂ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ.

ಆದರೆ, ಅವರು ಡಿಸೆಂಬರ್ 14ರ ವರೆಗೆ ಖಾಸಗಿ ಆಸ್ಪತ್ರೆಯಲ್ಲೇ ಇರಲಿ ಎಂದು ಬಾಂಬೆ ಉಚ್ಚ ನ್ಯಾಯಾಲಯ ಗುರುವಾರ ಹೇಳಿದೆ. ವರವರ ರಾವ್ ಅವರು ನವೆಂಬರ್ 18ರಂದು ದಾಖಲಾದ ನಾನಾವತಿ ಆಸ್ಪತ್ರೆ ಸಲ್ಲಿಸಿದ ವರದಿಯನ್ನು ನ್ಯಾಯಮೂರ್ತಿ ಎಸ್.ಎಸ್. ಶಿಂಧೆ ಹಾಗೂ ಎಂ.ಎಸ್. ಕಾರ್ನಿಕ್ ಅವರನ್ನೊಳಗೊಂಡ ನ್ಯಾಯಪೀಠ ಪರಿಶೀಲನೆ ನಡೆಸಿತು. ‘‘ವರವರ ರಾವ್ ಅವರ ಆರೋಗ್ಯ ಸ್ಥಿತಿಯಲ್ಲಿ ಸಣ್ಣ ಸುಧಾರಣೆ ಇದೆ. ಅವರು ಡಿಸೆಂಬರ್ 14ರ ವರೆಗೆ ಅಲ್ಲಿಯೇ ಇರಲಿ’’ ಎಂದು ನ್ಯಾಯಾಲಯ ಹೇಳಿದೆ.

ವೈದ್ಯಕೀಯ ನೆಲೆಯಲ್ಲಿ ಜಾಮೀನು ಕೋರಿ ವರವರ ರಾವ್ ಸಲ್ಲಿಸಿದ ಹಾಗೂ ವೈದ್ಯಕೀಯ ಚಿಕಿತ್ಸೆಗೆ ವರವರ ರಾವ್ ಅವರನ್ನು ಕಾರಾಗೃಹದಿಂದ ನಾನಾವತಿ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ಕೋರಿ ಅವರ ಪತ್ನಿ ಹೇಮಲತಾ ಡಿಸೆಂಬರ್ 14ರಂದು ಸಲ್ಲಿಸಿದ ಮನವಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News