ಅಮೆರಿಕ: ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಪರಂಪರೆ ಅಧ್ಯಯನಕ್ಕಾಗಿ ಮಸೂದೆ

Update: 2020-12-04 16:49 GMT
ಫೊಟೊ ಕೃಪೆ: twitter.com 

ವಾಶಿಂಗ್ಟನ್, ಡಿ. 4: ಮಹಾತ್ಮಾ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಸಾಧನೆ ಮತ್ತು ಪರಂಪರೆಗಳ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಭಾರತ ಮತ್ತು ಅಮೆರಿಕದ ನಡುವೆ ವಿನಿಮಯ ಕಾರ್ಯಕ್ರಮವೊಂದಕ್ಕೆ ಅವಕಾಶ ಮಾಡಿಕೊಡುವ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗುರುವಾರ ಅಂಗೀಕರಿಸಿದೆ.

‘ಗಾಂಧಿ-ಕಿಂಗ್ ಸ್ಕಾಲರ್‌ಲಿ ಎಕ್ಸ್‌ಚೇಂಜ್ ಇನಿಶಿಯೇಟಿವ್ ಆ್ಯಕ್ಟ್’ ಎಂಬ ಹೆಸರಿನ ಮಸೂದೆಯ ಕರಡು ಪ್ರತಿಯನ್ನು ಈ ವರ್ಷದ ಆದಿ ಭಾಗದಲ್ಲಿ ನಿಧನ ಹೊಂದಿರುವ ನಾಗರಿಕ ಹಕ್ಕುಗಳ ಮುಂದಾಳು ಜಾನ್ ಲೂಯಿಸ್ ಬರೆದಿದ್ದಾರೆ ಹಾಗೂ ಭಾರತೀಯ ಅಮೆರಿಕನ್ ಸಂಸದ ಆಮಿ ಬೇರಾ ಅದರ ಸಹ ಪ್ರಾಯೋಜಕರಾಗಿದ್ದಾರೆ.

ಮಹಾತ್ಮಾ ಗಾಂಧಿ ಮತ್ತು ಮಾರ್ಟಿನ್ ಲೂಥರ್ ಕಿಂಗ್‌ರ ಪರಂಪರೆಗಳ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಉಭಯ ದೇಶಗಳ ವಿದ್ವಾಂಸರನ್ನೊಳಗೊಂಡ ವಾರ್ಷಿಕ ಶೈಕ್ಷಣಿಕ ವೇದಿಕೆಯೊಂದನ್ನು ಭಾರತ ಸರಕಾರದ ಸಹಕಾರದೊಂದಿಗೆ ರಚಿಸಲು ಈ ಮಸೂದೆಯು ಅಮೆರಿಕದ ವಿದೇಶಾಂಗ ಇಲಾಖೆಗೆ ಅಧಿಕಾರ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News