ಸಾರ್ವಜನಿಕವಾಗಿ ಲಸಿಕೆ ಪಡೆಯಲು ಒಬಾಮ, ಬುಶ್, ಕ್ಲಿಂಟನ್, ಬೈಡನ್ ಅಸ್ತು

Update: 2020-12-04 17:31 GMT

ವಾಶಿಂಗ್ಟನ್, ಡಿ. 4: ಕೊರೋನ ವೈರಸ್ ಲಸಿಕೆಯ ಮೇಲೆ ಜನರಿಗೆ ನಂಬಿಕೆ ಬರುವಂತೆ ಮಾಡುವುದಕ್ಕಾಗಿ ಸಾರ್ವಜನಿಕವಾಗಿ ಲಸಿಕೆಯನ್ನು ಸ್ವೀಕರಿಸಲು ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬರಾಕ್ ಒಬಾಮ, ಜಾರ್ಜ್ ಡಬ್ಲ್ಯು. ಬುಶ್, ಬಿಲ್ ಕ್ಲಿಂಟನ್ ಹಾಗೂ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಮುಂದೆ ಬಂದಿದ್ದಾರೆ.

ಅವೆುರಿಕದ ಉನ್ನತ ಸಾಂಕ್ರಾಮಿಕ ರೋಗಗಳ ಪರಿಣತ ಆಂತೊನಿ ಫೌಚಿ ಕೋವಿಡ್-19 ಲಸಿಕೆಯೊಂದಕ್ಕೆ ಅನುಮೋದನೆ ನೀಡಿದರೆ ನಾನು ಲಸಿಕೆ ಸ್ವೀಕರಿಸುವೆ ಎಂಬುದಾಗಿ ‘ಸಿರಿಯಸ್‌ಎಕ್ಸ್‌ಎಮ್ ರೇಡಿಯೊ’ಗೆ ನೀಡಿದ ಸಂದರ್ಶನವೊಂದರಲ್ಲಿ ಒಬಾಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News